ಯೆರೆಮಿಯ 1:16

ನನ್ನನ್ನು ಬಿಟ್ಟು ಬೇರೆ ದೇವರುಗಳಿಗೆ ಧೂಪವನ್ನರ್ಪಿಸಿ ತಮ್ಮ ಸ್ವಂತ ಕೈಕೆಲಸಗಳಿಗೆ ಅಡ್ಡಬಿದ್ದಿ ದ್ದಾರೆ. ಅವರ ಎಲ್ಲಾ ಕೆಟ್ಟತನದ ನಿಮಿತ್ತ ಅವರಿಗೆ ವಿರೋಧವಾಗಿ ನನ್ನ ನ್ಯಾಯತೀರ್ಪುಗಳನ್ನು ನುಡಿಯು ವೆನು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 1

14ಆಗ ಕರ್ತನು ನನಗೆ--ಉತ್ತರ ಕಡೆಯಿಂದ ದೇಶದ ನಿವಾಸಿಗಳೆಲ್ಲರ ಮೇಲೆ ಕೇಡು ಹೊರಟು ಬರುವದು.

15ಇಗೋ, ನಾನು ಉತ್ತರದಲ್ಲಿರುವ ರಾಜ್ಯಗಳ ಕುಟುಂಬಗಳನ್ನೆಲ್ಲಾ ಕರೆಯುತ್ತೇನೆಂದು ಕರ್ತನು ಅನ್ನು ತ್ತಾನೆ; ಅವರು ಬಂದು ತಮ್ಮ ತಮ್ಮ ಸಿಂಹಾಸನಗಳನ್ನು ಯೆರೂಸಲೇಮಿನ ಬಾಗಿಲುಗಳ ಪ್ರವೇಶದಲ್ಲಿಯೂ ಅದರ ಸುತ್ತಲಾಗಿರುವ ಗೋಡೆಗಳಿಗೆ ಎದುರಾಗಿಯೂ ಯೆಹೂದದ ಎಲ್ಲಾ ಪಟ್ಟಣಗಳಿಗೆ ಎದುರಾಗಿಯೂ ಇರಿಸುವರು.

16ನನ್ನನ್ನು ಬಿಟ್ಟು ಬೇರೆ ದೇವರುಗಳಿಗೆ ಧೂಪವನ್ನರ್ಪಿಸಿ ತಮ್ಮ ಸ್ವಂತ ಕೈಕೆಲಸಗಳಿಗೆ ಅಡ್ಡಬಿದ್ದಿ ದ್ದಾರೆ. ಅವರ ಎಲ್ಲಾ ಕೆಟ್ಟತನದ ನಿಮಿತ್ತ ಅವರಿಗೆ ವಿರೋಧವಾಗಿ ನನ್ನ ನ್ಯಾಯತೀರ್ಪುಗಳನ್ನು ನುಡಿಯು ವೆನು.

17ಆದದರಿಂದ ನೀನು ನಿನ್ನ ನಡುವನ್ನು ಕಟ್ಟಿ ನಿಂತುಕೊಂಡು ನಾನು ನಿನಗೆ ಆಜ್ಞಾಪಿಸುವದನ್ನೆಲ್ಲಾ ಅವರ ಸಂಗಡ ಮಾತನಾಡು; ನಾನು ನಿನ್ನನ್ನು ಅವರ ಮುಂದೆ ದಿಗಿಲುಪಡಿಸದ ಹಾಗೆ ನೀನು ಅವರಿಂದ ನಿರಾಶೆಪಡಬೇಡ.

18ಇಗೋ, ಸಮಸ್ತ ದೇಶಕ್ಕೆ ವಿರೋಧವಾಗಿ ಯೆಹೂದದ ಅರಸರಿಗೆ ವಿರೋಧ ವಾಗಿಯೂ ಅದರ ಪ್ರಧಾನರಿಗೆ ವಿರೋಧವಾಗಿಯೂ ಅದರ ಯಾಜಕರಿಗೆ ವಿರೋಧವಾಗಿಯೂ ದೇಶದ ಜನರಿಗೆ ವಿರೋಧವಾಗಿಯೂ ನಾನೇ ಈ ಹೊತು ನಿನ್ನನ್ನು ಕೋಟೆಯುಳ್ಳ ಪಟ್ಟಣವಾಗಿಯೂ ಕಬ್ಬಿಣದ ಸ್ತಂಭವಾಗಿಯೂ ಹಿತ್ತಾಳೆಯ ಗೋಡೆಗಳಾಗಿಯೂ ಮಾಡಿದ್ದೇನೆ.

ಯೆರೆಮಿಯ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी