ಕೀರ್ತನೆಗಳು 65:7

ಸಮುದ್ರ ಗಳ ಘೋಷವನ್ನೂ ಅವುಗಳ ತೆರೆಗಳ ಘೋಷವನ್ನೂ ಪ್ರಜೆಗಳ ಕೋಲಾಹಲವನ್ನೂ ಅಣಗಿಸುವಾತನೇ,

ಸಂದರ್ಭದೊಂದಿಗೆ ಓದಿ · ಕೀರ್ತನೆಗಳು 65

5ನಮ್ಮ ರಕ್ಷಣೆಯ ಓ ದೇವರೇ, ಭಯಂಕರವಾದ ವುಗಳಿಂದ ನೀತಿಯಲ್ಲಿ ನೀನು ನಮಗೆ ಉತ್ತರ ಕೊಡುವಿ; ಭೂಮಿಯ ಎಲ್ಲಾ ಅಂತ್ಯಗಳಿಗೂ ಸಮುದ್ರ ದಲ್ಲಿ ದೂರವಾದವರಿಗೂ ನೀನು ಭರವಸವಾಗಿದ್ದೀ.

6ಬೆಟ್ಟಗಳನ್ನು ತನ್ನ ಶಕ್ತಿಯಿಂದ ನಿಲ್ಲಿಸುವಾತನೇ, ಪರಾಕ್ರಮದಿಂದ ನಡುಕಟ್ಟಿಕೊಂಡಾತನೇ,

7ಸಮುದ್ರ ಗಳ ಘೋಷವನ್ನೂ ಅವುಗಳ ತೆರೆಗಳ ಘೋಷವನ್ನೂ ಪ್ರಜೆಗಳ ಕೋಲಾಹಲವನ್ನೂ ಅಣಗಿಸುವಾತನೇ,

8ಭೂಮಿಯ ಕಟ್ಟಕಡೆಗಳಲ್ಲಿ ವಾಸಿಸುವವರು ಸಹ ನಿನ್ನ ಗುರುತುಗಳಿಗೆ ಭಯಪಡುವರು. ಉದಯಾಸ್ತ ಮಾನ ಸಮಯಗಳನ್ನು ಉತ್ಸಾಹಧ್ವನಿಗೈಯುವಂತೆ ನೀನು ಮಾಡುತ್ತೀ.

9ನೀನು ಭೂಮಿಯನ್ನು ಕಟಾಕ್ಷಿಸಿ ಅದನ್ನು ತೋಯಿಸಿ ನೀರಿನಿಂದ ತುಂಬಿರುವಂತೆ ದೇವರ ನದಿ ಯಿಂದ ಅದನ್ನು ಚೆನ್ನಾಗಿ ಹದಗೊಳಿಸುತ್ತೀ; ಹೀಗೆ ಭೂಮಿಯನ್ನು ಸಿದ್ಧಮಾಡಿ ಮನುಷ್ಯರಿಗೆ ಧಾನ್ಯವನ್ನು ಒದಗಿಸುತ್ತೀ.

ಕೀರ್ತನೆಗಳು 65 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी