ಆ ಹುಡುಗನು ಏನೂ ತಿಳಿಯದೆ ಇದ್ದನು. ಯೋನಾತಾನನೂ ದಾವೀದನೂ ಮಾತ್ರ ಆ ಸಂಗತಿ ಯನ್ನು ತಿಳುಕೊಂಡಿದ್ದರು.
37ಯೋನಾತಾನನು ಹಾಕಿದ ಬಾಣಬಿದ್ದ ಸ್ಥಳದ ವರೆಗೆ ಹುಡುಗನು ಹೋದಾಗ--ಬಾಣವು ನಿನಗೆ ಆಚೆ ಇಲ್ಲವೋ ಎಂದು ಯೋನಾತಾನನು ಹುಡುಗನ ಹಿಂದೆ ಕೂಗಿದನು.
38ನೀನು ಆಲಸ್ಯವಿಲ್ಲದೆ ತ್ವರೆಯಾಗಿ ಹೋಗು ಎಂದು ಯೋನಾತಾನನು ಹುಡುಗನ ಹಿಂದೆ ಕೂಗಿ ಹೇಳಿದನು. ಹಾಗೆಯೇ ಯೋನಾತಾನನ ಹುಡುಗನು ಬಾಣಗಳನ್ನು ಕೂಡಿಸಿಕೊಂಡು ತನ್ನ ಯಜಮಾನನ ಬಳಿಗೆ ಬಂದನು.
39ಆ ಹುಡುಗನು ಏನೂ ತಿಳಿಯದೆ ಇದ್ದನು. ಯೋನಾತಾನನೂ ದಾವೀದನೂ ಮಾತ್ರ ಆ ಸಂಗತಿ ಯನ್ನು ತಿಳುಕೊಂಡಿದ್ದರು.
40ಆಗ ಯೋನಾತಾನನು ಆಯುಧಗಳನ್ನು ತನ್ನ ಹುಡುಗನಿಗೆ ಕೊಟ್ಟು ಅವನಿಗೆ--ಅವುಗಳನ್ನು ಪಟ್ಟಣ ದೊಳಕ್ಕೆ ತೆಗೆದುಕೊಂಡು ಹೋಗು ಅಂದನು.
41ಹುಡುಗನು ಹೋಗುತ್ತಲೇ ದಾವೀದನು ದಕ್ಷಿಣ ಕಡೆಯಿಂದ ಎದ್ದುಬಂದು ಬೋರಲು ಬಿದ್ದು ಮೂರು ಸಾರಿ ವಂದಿಸಿದನು. ಅವರು ಒಬ್ಬರಿಗೊ ಬ್ಬರು ಮುದ್ದಿಟ್ಟುಕೊಂಡು ಒಬ್ಬರನ್ನೊಬ್ಬರು ನೋಡಿ ಅತ್ತರು; ದಾವೀದನು ಬಹಳವಾಗಿ ಅತ್ತನು;
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ