ಯೆಹೆಜ್ಕೇಲನು 28:24

ಇಸ್ರಾಯೇಲ್‌ ವಂಶದವರಿಗೆ ಚುಚ್ಚುವ ದತ್ತೂರಿ ಸುತ್ತಲೂ ಹೀನೈಸುವ ನೋಯಿಸುವ ಮುಳ್ಳು ಇನ್ನಿರದು; ನಾನೇ ದೇವರಾದ ಕರ್ತನೆಂದು ಅವರಿಗೆ ತಿಳಿಯುವದು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 28

22ನೀನು ಹೇಳಬೇಕಾದದ್ದೇನಂದರೆ -- ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಚಿದೋನೇ ನಾನು ನಿನಗೆ ವಿರೋಧವಾಗಿದ್ದೇನೆ; ನಿನ್ನ ಮಧ್ಯದಲ್ಲಿ ಘನವನ್ನು ಹೊಂದುವೆನು. ಆಗ ನಾನು ಅದರಲ್ಲಿ ನ್ಯಾಯಗಳನ್ನು ತೀರಿಸಿ, ಪರಿಶುದ್ಧನಾಗುವಾಗ ನಾನೇ ಕರ್ತನೆಂದು ತಿಳಿಯುವರು.

23ಅದರಲ್ಲಿ ವ್ಯಾಧಿಯನ್ನೂ ಬೀದಿಗಳಲ್ಲಿ ರಕ್ತವನ್ನು ಕಳುಹಿಸುವೆನು; ಸುತ್ತಲೂ ಅದಕ್ಕೆ ವಿರುದ್ಧವಾಗಿ ಕತ್ತಿಯಿಂದ ಹತವಾದವರು ಅದರಲ್ಲಿ ಬೀಳುವರು; ಆಗ ನಾನೇ ಕರ್ತನೆಂದು ತಿಳಿಯುವರು.

24ಇಸ್ರಾಯೇಲ್‌ ವಂಶದವರಿಗೆ ಚುಚ್ಚುವ ದತ್ತೂರಿ ಸುತ್ತಲೂ ಹೀನೈಸುವ ನೋಯಿಸುವ ಮುಳ್ಳು ಇನ್ನಿರದು; ನಾನೇ ದೇವರಾದ ಕರ್ತನೆಂದು ಅವರಿಗೆ ತಿಳಿಯುವದು.

25ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ಇಸ್ರಾಯೇಲ್ಯರ ಮನೆತನದವರನ್ನು ಚದರಿಹೋದ ಜನಾಂಗದಿಂದ ಒಂದುಗೂಡಿಸಿ ಅನ್ಯಜನಾಂಗಗಳ ಮುಂದೆ ಅವರಲ್ಲಿ ಪರಿಶುದ್ಧವಾದ ಮೇಲೆ ಇಸ್ರಾ ಯೇಲ್ಯರು ನನ್ನ ಸೇವಕನಾದ ಯಾಕೋಬನಿಗೆ ನಾನು ಅನುಗ್ರಹಿಸಿದ ತಮ್ಮ ದೇಶದಲ್ಲಿಯೇ ವಾಸಿಸುವರು;

26ಅವರು ನಿರ್ಭಯರಾಗಿ ಅಲ್ಲಿ ವಾಸಿಸುವರು; ಮನೆ ಗಳನ್ನು ಕಟ್ಟುವರು; ದ್ರಾಕ್ಷೇತೋಟಗಳನ್ನು ನೆಡುವರು; ಹೌದು, ಸುತ್ತಲಾಗಿ ಅವರನ್ನು ಅಸಡ್ಡೆ ಮಾಡಿದವರೆಲ್ಲರ ಮೇಲೆ ನಾನು ನ್ಯಾಯ ತೀರಿಸಿದ ಮೇಲೆ ಅವರು ನಿರ್ಭಯರಾಗಿ ವಾಸಿಸುವರು. ಕರ್ತನಾದ ನಾನೇ ಅವರ ದೇವರೆಂದು ತಿಳಿಯುವರು.

ಯೆಹೆಜ್ಕೇಲನು 28 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी