೨ ಅರಸುಗಳು 23:7

ಸ್ತ್ರೀಯರು ವಿಗ್ರಹದ ತೋಪಿಗೋಸ್ಕರ ಮನೆಗಳನ್ನು ನೇಯುತ್ತಿದ್ದ ಕಡೆಯಲ್ಲಿ ಕರ್ತನ ಮನೆಯ ಬಳಿಯಲ್ಲಿ ಇದ್ದ ಪುರುಷ ಸಂಗಮರ ಮನೆಗಳನ್ನು ಕೆಡವಿಸಿದನು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 23

5ಇದಲ್ಲದೆ ಯೆಹೂದದ ಪಟ್ಟಣಗಳಲ್ಲಿರುವ ಉನ್ನತ ಸ್ಥಳಗಳ ಲ್ಲಿಯೂ ಯೆರೂಸಲೇಮಿನ ಸುತ್ತಲಿರುವ ಉನ್ನತ ಸ್ಥಳಗಳಲ್ಲಿಯೂ ಧೂಪವನ್ನು ಸುಡಲು ಯೆಹೂದದ ಅರಸುಗಳು ನೇಮಿಸಿದ್ದ ಪೂಜಾರಿಗಳನ್ನೂ ಬಾಳನಿಗೂ ಸೂರ್ಯನಿಗೂ ಚಂದ್ರನಿಗೂ ಹನ್ನೆರಡು ರಾಶಿಗಳಿಗೂ ಆಕಾಶದ ಎಲ್ಲಾ ಸೈನ್ಯಕ್ಕೂ ಧೂಪಸುಡುವವರಾರೂ ಇರದ ಹಾಗೆ ಮಾಡಿದನು.

6ಕರ್ತನ ಆಲಯದೊ ಳಗಿಂದ ವಿಗ್ರಹದ ತೋಪನ್ನು ಯೆರೂಸಲೇಮಿನ ಹೊರಗೆ ಕಿದ್ರೋನ್‌ ಹಳ್ಳಕ್ಕೆ ಅದನ್ನು ತರಿಸಿ ಅವನು ಕಿದ್ರೋನ್‌ ಹಳ್ಳದ ಬಳಿಯಲ್ಲಿ ಸುಟ್ಟು ಧೂಳಾಗಿ ಪುಡಿಮಾಡಿ ಆ ಧೂಳಿನ ಪುಡಿಯನ್ನು ಜನರ ಸಮಾಧಿ ಗಳ ಮೇಲೆ ಹಾಕಿಸಿದನು.

7ಸ್ತ್ರೀಯರು ವಿಗ್ರಹದ ತೋಪಿಗೋಸ್ಕರ ಮನೆಗಳನ್ನು ನೇಯುತ್ತಿದ್ದ ಕಡೆಯಲ್ಲಿ ಕರ್ತನ ಮನೆಯ ಬಳಿಯಲ್ಲಿ ಇದ್ದ ಪುರುಷ ಸಂಗಮರ ಮನೆಗಳನ್ನು ಕೆಡವಿಸಿದನು.

8ಇದಲ್ಲದೆ ಅವನು ಯೆಹೂದದ ಪಟ್ಟಣಗಳಿಂದ ಯಾಜಕರೆಲ್ಲರನ್ನು ಬರ ಮಾಡಿ ಗೆಬ ಮೊದಲುಗೊಂಡು ಬೇರ್ಷೆಬದ ವರೆಗೂ ಯಾಜಕರು ಧೂಪ ಸುಡುತ್ತಿದ್ದ ಉನ್ನತ ಸ್ಥಳಗಳನ್ನು ಹೊಲೆಮಾಡಿ ಪಟ್ಟಣದ ಬಾಗಲಿನ ಎಡಪಾರ್ಶ್ವದಲ್ಲಿದ್ದ ಪಟ್ಟಣದ ಅಧಿಪತಿಯಾದ ಯೆಹೋಶುವನ ಬಾಗಲಿನ ದ್ವಾರದಲ್ಲಿದ್ದ ಬಾಗಲುಗಳ ಉನ್ನತ ಸ್ಥಳಗಳನ್ನು ಕೆಡವಿ ಹಾಕಿದನು.

9ಆದರೆ ಉನ್ನತ ಸ್ಥಳಗಳ ಯಾಜಕರು ಯೆರೂಸಲೇಮಿನಲ್ಲಿರುವ ಕರ್ತನ ಬಲಿಪೀಠದ ಬಳಿ ಯಲ್ಲಿ ಸೇರದೆ ತಮ್ಮ ಸಹೋದರರ ಮಧ್ಯದಲ್ಲಿ ಹುಳಿ ಇಲ್ಲದ ರೊಟ್ಟಿಯನ್ನು ತಿನ್ನುತ್ತಾ ಇದ್ದರು.

೨ ಅರಸುಗಳು 23 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी