ಅರಣ್ಯಕಾಂಡ 5:15

ಆ ಮನು ಷ್ಯನು ತನ್ನ ಹೆಂಡತಿಯನ್ನು ಯಾಜಕನ ಬಳಿಗೆ ತಂದು ಅವಳಿಗೋಸ್ಕರ ಕಾಣಿಕೆಯಾಗಿ ಏಫದ ಹತ್ತನೇ ಪಾಲನ್ನು ಜವೆಗೋಧಿಯ ಹಿಟ್ಟನ್ನು ತರಬೇಕು. ಅದರ ಮೇಲೆ ಎಣ್ಣೆಯನ್ನಾದರೂ ಸಾಂಬ್ರಾಣಿಯನ್ನಾದರೂ ಹಾಕ ಬಾರದು; ಅದು ರೋಷದ ಕಾಣಿಕೆಯೂ ಅಪರಾಧ ವನ್ನು ಜ್ಞಾಪಕಕ್ಕೆ ತರುವ ಕಾಣಿಕೆಯೂ ಆಗಿದೆ.

ಸಂದರ್ಭದೊಂದಿಗೆ ಓದಿ · ಅರಣ್ಯಕಾಂಡ 5

13ಇಲ್ಲವೆ ಒಬ್ಬನು ಅವಳ ಸಂಗಡ ಮಲಗಿ ಸಂಗಮ ಮಾಡಿದ್ದು ಅವಳ ಗಂಡನ ಕಣ್ಣುಗಳಿಗೆ ಮರೆಯಾಗಿದ್ದರೆ, ಅವಳು ಅಶುದ್ಧಳೆಂಬದು ಗುಪ್ತವಾಗಿ ದ್ದರೆ, ಅವಳಿಗೆ ವಿರೋಧವಾಗಿ ಸಾಕ್ಷಿ ಇಲ್ಲದೆ ಅವಳು ಹಿಡಿಯಲ್ಪಡದಿದ್ದರೆ,

14ಗಂಡನ ಮೇಲೆ ರೋಷದ ಆತ್ಮ ಬಂದು ಅವನು ಅಶುದ್ಧಳಾದ ತನ್ನ ಹೆಂಡತಿಯ ಮೇಲೆ ರೋಷಗೊಂಡರೆ ಇಲ್ಲವೆ ರೋಷದ ಆತ್ಮವು ಅವನ ಮೇಲೆ ಬಂದು ಅಶುದ್ಧಳಾಗದೆ ಇರುವ ತನ್ನ ಹೆಂಡತಿಯ ಮೇಲೆ ರೋಷಗೊಂಡರೆ,

15ಆ ಮನು ಷ್ಯನು ತನ್ನ ಹೆಂಡತಿಯನ್ನು ಯಾಜಕನ ಬಳಿಗೆ ತಂದು ಅವಳಿಗೋಸ್ಕರ ಕಾಣಿಕೆಯಾಗಿ ಏಫದ ಹತ್ತನೇ ಪಾಲನ್ನು ಜವೆಗೋಧಿಯ ಹಿಟ್ಟನ್ನು ತರಬೇಕು. ಅದರ ಮೇಲೆ ಎಣ್ಣೆಯನ್ನಾದರೂ ಸಾಂಬ್ರಾಣಿಯನ್ನಾದರೂ ಹಾಕ ಬಾರದು; ಅದು ರೋಷದ ಕಾಣಿಕೆಯೂ ಅಪರಾಧ ವನ್ನು ಜ್ಞಾಪಕಕ್ಕೆ ತರುವ ಕಾಣಿಕೆಯೂ ಆಗಿದೆ.

16ಯಾಜಕನು ಅವಳನ್ನು ಸವಿಾಪಕ್ಕೆ ಕರೆದು ಕರ್ತನ ಸಮ್ಮುಖದಲ್ಲಿ ನಿಲ್ಲಿಸಬೇಕು.

17ಆಗ ಯಾಜಕನು ಪವಿತ್ರ ವಾದ ನೀರನ್ನು ಮಣ್ಣಿನ ಗಡಿಗೆಗಳಲ್ಲಿ ತೆಗೆದು ಕೊಳ್ಳಬೇಕು; ಗುಡಾರದ ನೆಲದಲ್ಲಿರುವ ಧೂಳನ್ನು ಯಾಜಕನು ತಕ್ಕೊಂಡು ಆ ನೀರಿನೊಳಗೆ ಹಾಕಬೇಕು.

ಅರಣ್ಯಕಾಂಡ 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी