ದಾನಿಯೇಲನು 10:10

ಇಗೋ, ಒಂದು ಕೈ ನನ್ನನ್ನು ಮುಟ್ಟಿ ನನ್ನ ಮೊಣಕಾಲುಗಳ ಮೇಲೆಯೂ ನನ್ನ ಅಂಗೈಗಳ ಮೇಲೆಯೂ ನಿಲ್ಲುವಂತೆ ಮಾಡಿತು.

ಸಂದರ್ಭದೊಂದಿಗೆ ಓದಿ · ದಾನಿಯೇಲನು 10

8ನಾನು ಒಬ್ಬನೇ ಉಳಿದು ಈ ದೊಡ್ಡ ದರ್ಶನವನ್ನು ನೋಡಿದೆನು; ನನ್ನಲ್ಲಿ ತ್ರಾಣವು ಇರ ಲಿಲ್ಲ. ನನ್ನ ಸೌಂದರ್ಯವು ನನ್ನಲ್ಲಿ ಕುಂದಿಹೋಯಿತು. ನನಗೆ ತ್ರಾಣವು ಇಲ್ಲದೆ ಹೋಯಿತು.

9ಆದಾಗ್ಯೂ ನಾನು ಆತನ ಮಾತುಗಳ ಧ್ವನಿಯನ್ನು ಕೇಳಿದೆನು, ಮತ್ತು ಆತನ ಮಾತುಗಳ ಧ್ವನಿಯನ್ನು ಕೇಳಿದಾಗ ಮುಖ ಕೆಳಗೆ ಮಾಡಿ ಗಾಢನಿದ್ರೆಯಲ್ಲಿದ್ದೆನು. ನನ್ನ ಮುಖ ನೆಲದ ಕಡೆಗೆ ಇತ್ತು.

10ಇಗೋ, ಒಂದು ಕೈ ನನ್ನನ್ನು ಮುಟ್ಟಿ ನನ್ನ ಮೊಣಕಾಲುಗಳ ಮೇಲೆಯೂ ನನ್ನ ಅಂಗೈಗಳ ಮೇಲೆಯೂ ನಿಲ್ಲುವಂತೆ ಮಾಡಿತು.

11ಆಗ ಆತನು ನನಗೆ ಹೇಳಿದ್ದೇನಂದರೆ--ಓ ದಾನಿ ಯೇಲನೇ, ಅತಿಪ್ರಿಯನಾದ ಮನುಷ್ಯನೇ, ನಾನು ನಿನಗೆ ಹೇಳುವ ಮಾತುಗಳನ್ನು ತಿಳಿದುಕೊಂಡು ಸ್ಥಿರವಾಗಿ ನಿಲ್ಲು. ನಾನು ಈಗ ನಿನ್ನ ಬಳಿಗೆ ಕಳುಹಿಸ ಲ್ಪಟ್ಟಿದ್ದೇನೆ. ಅವನು ಈ ಮಾತುಗಳನ್ನು ಹೇಳಿದ ಮೇಲೆ ನಾನು ನಡುಗುತ್ತಲೇ ನಿಂತೆನು.

12ಆಗ ಅವನು ನನಗೆ ಹೇಳಿದ್ದೇನಂದರೆ--ದಾನಿಯೇಲನೇ, ನೀನು ಭಯಪಡಬೇಡ, ಯಾಕಂದರೆ ನೀನು ತಿಳಿದುಕೊಳ್ಳು ವದಕ್ಕೂ ನಿನ್ನ ದೇವರ ಮುಂದೆ ನಿನ್ನನ್ನು ತಗ್ಗಿಸಿಕೊಳ್ಳು ವದಕ್ಕೂ ಮನಸ್ಸಿಟ್ಟ ಮೊದಲನೆಯ ದಿನದಲ್ಲಿಯೇ ನಿನ್ನ ಮಾತುಗಳು ಕೇಳಲ್ಪಟ್ಟವು. ಆ ನಿನ್ನ ಮಾತುಗಳ ನಿಮಿತ್ತವಾಗಿಯೇ ನಾನು ಬಂದಿದ್ದೇನೆ;

ದಾನಿಯೇಲನು 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी