೨ ಸಮುವೇಲನು 20:9

ಆಗ ಯೋವಾಬನು ಅಮಾಸನಿಗೆ--ನನ್ನ ಸಹೋದರನೇ, ಕ್ಷೇಮವೋ ಅಂದನು. ಯೋವಾಬನು ಮುದ್ದಿಡುವುದಕ್ಕೋಸ್ಕರ ತನ್ನ ಬಲಗೈಯಿಂದ ಅವನ ಗಡ್ಡವನ್ನು ಹಿಡಿದನು. ಆದರೆ ಅಮಾಸನು ಯೋವಾಬನ ಕೈಯಲ್ಲಿದ್ದ ಕತ್ತಿ ಯನ್ನು ಗಮನಿಸದಿದ್ದಾಗ ಯೋವಾಬನು ಅವನನ್ನು ಕರುಳುಗಳು ಹೊರಬರುವ ಹಾಗೆ ಅವನ ಪಕ್ಕೆಯ ಐದನೇ ಎಲುಬಿನಲ್ಲಿ ತಿವಿದನು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 20

7ಹಾಗೆಯೇ ಅವನ ಹಿಂದೆ ಯೋವಾಬನ ಜನರೂ ಕೆರೇತ್ಯರೂ ಪೆಲೇ ತ್ಯರೂ ಎಲ್ಲಾ ಪರಾಕ್ರಮಶಾಲಿಗಳೂ ಬಿಕ್ರಿಯ ಮಗ ನಾದ ಶೆಬನನ್ನು ಹಿಂದಟ್ಟಲು ಯೆರೂಸಲೇಮಿನಿಂದ ಹೊರಟರು.

8ಅವರು ಗಿಬ್ಯದ ಸವಿಾಪದಲ್ಲಿರುವ ದೊಡ್ಡಕಲ್ಲಿನ ಬಳಿಗೆ ಬಂದಾಗ ಅಮಾಸನು ಅವರ ಮುಂದೆ ಹೋದನು. ಆದರೆ ಯೋವಾಬನು ತಾನು ತೊಟ್ಟು ಕೊಂಡಿರುವ ಅಂಗಿಯ ಮೇಲೆ ಒಂದು ನಡು ಕಟ್ಟನ್ನು ಕಟ್ಟಿಕೊಂಡಿದ್ದನು. ಅದರಲ್ಲಿ ಒರೆಯ ಸಂಗಡ ಒಂದು ಕತ್ತಿಯು ಅವನ ನಡುವಿನಲ್ಲಿ ತೂಗುತ್ತಿತ್ತು. ಅವನು ನಡೆಯುವಾಗ ಅದು ಬಿತ್ತು.

9ಆಗ ಯೋವಾಬನು ಅಮಾಸನಿಗೆ--ನನ್ನ ಸಹೋದರನೇ, ಕ್ಷೇಮವೋ ಅಂದನು. ಯೋವಾಬನು ಮುದ್ದಿಡುವುದಕ್ಕೋಸ್ಕರ ತನ್ನ ಬಲಗೈಯಿಂದ ಅವನ ಗಡ್ಡವನ್ನು ಹಿಡಿದನು. ಆದರೆ ಅಮಾಸನು ಯೋವಾಬನ ಕೈಯಲ್ಲಿದ್ದ ಕತ್ತಿ ಯನ್ನು ಗಮನಿಸದಿದ್ದಾಗ ಯೋವಾಬನು ಅವನನ್ನು ಕರುಳುಗಳು ಹೊರಬರುವ ಹಾಗೆ ಅವನ ಪಕ್ಕೆಯ ಐದನೇ ಎಲುಬಿನಲ್ಲಿ ತಿವಿದನು.

10ಎರಡನೇ ಸಾರಿ ಹೊಡೆಯಲಿಲ್ಲ, ಅವನು ಸತ್ತನು. ಯೋವಾಬನೂ ಅವನ ಸಹೋದರನಾದ ಅಬೀಷೈಯೂ ಬಿಕ್ರೀಯ ಮಗನಾದ ಶೆಬನನ್ನು ಹಿಂದಟ್ಟಿದರು.

11ಯೋವಾಬನ ಜನರಲ್ಲಿ ಒಬ್ಬನು ಸತ್ತವನ ಬಳಿಯಲ್ಲಿ ನಿಂತು--ಯಾವನು ಯೋವಾಬನ ಮೇಲೆ ಇಷ್ಟವುಳ್ಳವನೋ ಯಾವನು ದಾವೀದನಿಗೆ ಹೊಂದಿದವನೋ ಅವನು ಯೋವಾಬನ ಹಿಂದೆ ಹೋಗಲಿ ಅಂದನು.

೨ ಸಮುವೇಲನು 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी