ಸಮುವೇಲನು ಬೆಳೆಯುತ್ತಾ ಬಂದನು; ಕರ್ತನು ಅವನ ಸಂಗಡ ಇದ್ದು ಆತನ ವಾಕ್ಯಗಳಲ್ಲಿ ಒಂದಾ ದರೂ ಭೂಮಿಗೆ ಬಿದ್ದು ಹೋಗಗೊಡಿಸಲಿಲ್ಲ.
17ಅದಕ್ಕವನು--ಇಗೋ, ಇದ್ದೇನೆ ಅಂದನು. ಏಲಿ ಯು ಅವನಿಗೆ--ಕರ್ತನು ನಿನಗೆ ಹೇಳಿದ ಮಾತೇನು? ನನಗೆ ಅದನ್ನು ಮರೆಮಾಡಬೇಡ. ಕರ್ತನು ನಿನಗೆ ಹೇಳಿದ ಸಕಲ ವಾರ್ತೆಗಳಲ್ಲಿ ನೀನು ಯಾವದನ್ನಾದರೂ ನನಗೆ ಮರೆಮಾಡಿದರೆ ದೇವರು ನಿನಗೆ ಅದಕ್ಕಿಂತ ಅಧಿಕವಾಗಿ ಮಾಡಲಿ ಅಂದನು.
18ಸಮುವೇಲನು ಒಂದನ್ನೂ ಮರೆಮಾಡದೆ ಆ ಮಾತುಗಳನ್ನೆಲ್ಲಾ ಅವನಿಗೆ ತಿಳಿಸಿದನು. ಅದಕ್ಕವನು--ಅದು ಕರ್ತನದೇ ಆಗಿದೆ. ಆತನು ಸರಿತೋರುವದನ್ನು ಮಾಡಲಿ ಅಂದನು.
19ಸಮುವೇಲನು ಬೆಳೆಯುತ್ತಾ ಬಂದನು; ಕರ್ತನು ಅವನ ಸಂಗಡ ಇದ್ದು ಆತನ ವಾಕ್ಯಗಳಲ್ಲಿ ಒಂದಾ ದರೂ ಭೂಮಿಗೆ ಬಿದ್ದು ಹೋಗಗೊಡಿಸಲಿಲ್ಲ.
20ಆಗ ಸಮುವೇಲನು ಕರ್ತನ ಪ್ರವಾದಿಯಾಗಿ ಸ್ಥಿರಮಾಡಲ್ಪ ಟ್ಟನೆಂದು ದಾನ್ ಊರು ಮೊದಲುಗೊಂಡು ಬೇರ್ಷ ಬದ ವರೆಗೂ ಇದ್ದ ಇಸ್ರಾಯೇಲ್ಯರೆಲ್ಲರು ತಿಳಿದಿದ್ದರು.
21ಕರ್ತನು ತಿರಿಗಿ ಶೀಲೋವಿನಲ್ಲಿ ಕಾಣಿಸಿಕೊಂಡನು. ಕರ್ತನು ಶೀಲೋವಿನಲ್ಲಿ ತನ್ನ ವಾಕ್ಯದಿಂದ ಸಮು ವೇಲನಿಗೆ ತನ್ನನ್ನು ಪ್ರಕಟಿಸಿಕೊಂಡನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ