ಯಾವ ಸೇವಕನೂ ಇಬ್ಬರು ಯಜಮಾನರನ್ನು ಸೇವಿಸಲಾರನು; ಯಾಕಂದರೆ ಅವನು ಒಬ್ಬನನ್ನು ಹಗೆಮಾಡಿ ಮತ್ತೊಬ್ಬನನ್ನು ಪ್ರೀತಿ ಸುವನು; ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಿರಸ್ಕರಿಸುವನು; ನೀವು ದೇವರನ್ನೂ ಧನವನ್ನೂ ಸೇವಿಸಲಾರಿರಿ ಅಂದನು.
11ಆದದರಿಂದ ಅನ್ಯಾಯವಾದ ಧನದಲ್ಲಿ ನೀವು ನಂಬಿಗಸ್ತರಾಗಿರದಿದ್ದರೆ ನಿಜವಾದ ಧನವನ್ನು ನಿಮ್ಮ ವಶಕ್ಕೆ ಯಾರು ಒಪ್ಪಿಸುವರು?
12ಇದಲ್ಲದೆ ಮತ್ತೊಬ್ಬನದರಲ್ಲಿ ನೀವು ನಂಬಿಗಸ್ತರಾಗಿರದಿದ್ದರೆ ನಿಮ್ಮ ಸ್ವಂತದ್ದನ್ನು ನಿಮಗೆ ಯಾರು ಕೊಡುವರು?
13ಯಾವ ಸೇವಕನೂ ಇಬ್ಬರು ಯಜಮಾನರನ್ನು ಸೇವಿಸಲಾರನು; ಯಾಕಂದರೆ ಅವನು ಒಬ್ಬನನ್ನು ಹಗೆಮಾಡಿ ಮತ್ತೊಬ್ಬನನ್ನು ಪ್ರೀತಿ ಸುವನು; ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಿರಸ್ಕರಿಸುವನು; ನೀವು ದೇವರನ್ನೂ ಧನವನ್ನೂ ಸೇವಿಸಲಾರಿರಿ ಅಂದನು.
14ಆಗ ಲೋಭಿ ಗಳಾದ ಫರಿಸಾಯರು ಸಹ ಇವೆಲ್ಲವುಗಳನ್ನು ಕೇಳಿ ಆತನಿಗೆ ಪರಿಹಾಸ್ಯ ಮಾಡಿದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ