೧ ಸಮುವೇಲನು 12:18

ಸಮುವೇಲನು ಕರ್ತನಿಗೆ ಮೊರೆ ಇಟ್ಟದ್ದರಿಂದ ಆ ದಿವಸದಲ್ಲೇ ಕರ್ತನು ಗುಡುಗನ್ನೂ ಮಳೆಯನ್ನೂ ಕಳುಹಿಸಿದನು. ಆಗ ಜನರೆಲ್ಲರು ಕರ್ತನಿಗೂ ಸಮು ವೇಲನಿಗೂ ಬಹಳವಾಗಿ ಭಯಪಟ್ಟರು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 12

16ಈಗ ನಿಂತುಕೊಂಡು ಕರ್ತನು ನಿಮ್ಮ ಕಣ್ಣುಗಳ ಮುಂದೆ ಮಾಡುವ ಈ ದೊಡ್ಡ ಕಾರ್ಯ ವನ್ನು ನೋಡಿರಿ.

17ಈ ದಿನ ಗೋಧಿಯ ಸುಗ್ಗಿ ಅಲ್ಲವೋ? ನೀವು ನಿಮಗೆ ಒಬ್ಬ ಅರಸನನ್ನು ಕೇಳಿದ್ದ ರಿಂದ ಕರ್ತನ ದೃಷ್ಟಿಗೆ ನೀವು ಮಾಡಿದ ನಿಮ್ಮ ಕೆಟ್ಟತ ನವು ಹೆಚ್ಚಾಗಿದೆ ಎಂದು ತಿಳುಕೊಂಡು ನೋಡುವ ಹಾಗೆ ನಾನು ಕರ್ತನಿಗೆ ಮೊರೆಯಿಡುವೆನು; ಆಗ ಆತನು ಗುಡುಗನ್ನೂ ಮಳೆಯನ್ನೂ ಕಳುಹಿಸುವನು.

18ಸಮುವೇಲನು ಕರ್ತನಿಗೆ ಮೊರೆ ಇಟ್ಟದ್ದರಿಂದ ಆ ದಿವಸದಲ್ಲೇ ಕರ್ತನು ಗುಡುಗನ್ನೂ ಮಳೆಯನ್ನೂ ಕಳುಹಿಸಿದನು. ಆಗ ಜನರೆಲ್ಲರು ಕರ್ತನಿಗೂ ಸಮು ವೇಲನಿಗೂ ಬಹಳವಾಗಿ ಭಯಪಟ್ಟರು.

19ಜನರೆಲ್ಲರು ಸಮುವೇಲನಿಗೆ--ನಾವು ಸಾಯದ ಹಾಗೆ ನಿನ್ನ ದೇವ ರಾದ ಕರ್ತನಿಗೆ ನಿನ್ನ ಸೇವಕರಿಗೋಸ್ಕರ ಪ್ರಾರ್ಥನೆ ಮಾಡು. ಯಾಕಂದರೆ ನಮಗೆ ಒಬ್ಬ ಅರಸನು ಬೇಕೆಂದು ಕೇಳಿ ನಮ್ಮ ಸಮಸ್ತ ಪಾಪಗಳಿಗೆ ಕೆಟ್ಟತನ ವನ್ನು ಕೂಡಿಸಿದೆವೆಂದು ಹೇಳಿದರು.

20ಆಗ ಸಮು ವೇಲನು ಜನರಿಗೆ--ನೀವು ಭಯಪಡಬೇಡಿರಿ. ಈ ಕೆಟ್ಟತನವನ್ನೆಲ್ಲಾ ಮಾಡಿದ್ದೀರಿ; ಆದರೂ ಕರ್ತನನ್ನು ಬಿಟ್ಟು ತಿರುಗದೆ ನಿಮ್ಮ ಪೂರ್ಣ ಹೃದಯದಿಂದ ಕರ್ತನನ್ನು ಸೇವಿಸಿರಿ. ಲಾಭಕರವಿಲ್ಲದಂಥವುಗಳನ್ನೂ ಬಿಡಿಸಲಾರದವುಗಳನ್ನೂ ವ್ಯರ್ಥವಾದವುಗಳನ್ನೂ ಅನುಸರಿಸುವದಕ್ಕೆ ಹೋಗಬೇಡಿರಿ.

೧ ಸಮುವೇಲನು 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी