ಲೂಕನು 20:16

ಅವನು ಬಂದು ಈ ಒಕ್ಕಲಿಗರನ್ನು ಸಂಹರಿಸಿ ದ್ರಾಕ್ಷೇತೋಟ ವನ್ನು ಬೇರೆಯವರಿಗೆ ಕೊಡುವನು ಅಂದನು. ಅವರು ಇದನ್ನು ಕೇಳಿ--ಹಾಗೆ ಎಂದಿಗೂ ಆಗಬಾರದು ಅಂದರು.

ಸಂದರ್ಭದೊಂದಿಗೆ ಓದಿ · ಲೂಕನು 20

14ಆದರೆ ಒಕ್ಕಲಿಗರು ಅವನನ್ನು ನೋಡಿದಾಗ ತಮ್ಮತಮ್ಮೊಳಗೆ--ಇವನೇ ಬಾಧ್ಯಸ್ಥನು; ಬನ್ನಿರಿ, ಇವ ನನ್ನು ಕೊಂದುಹಾಕೋಣ ಬಾಧ್ಯತೆಯು ನಮ್ಮದಾಗು ತ್ತದೆ ಎಂದು ಆಲೋಚನೆ ಮಾಡಿಕೊಂಡರು.

15ಅವರು ಅವನನ್ನು ದ್ರಾಕ್ಷೇ ತೋಟದ ಹೊರಗೆಹಾಕಿ ಕೊಂದರು. ಹೀಗಿರಲು ದ್ರಾಕ್ಷೇತೋಟದ ಯಜ ಮಾನನು ಅವರಿಗೆ ಏನು ಮಾಡುವನು?

16ಅವನು ಬಂದು ಈ ಒಕ್ಕಲಿಗರನ್ನು ಸಂಹರಿಸಿ ದ್ರಾಕ್ಷೇತೋಟ ವನ್ನು ಬೇರೆಯವರಿಗೆ ಕೊಡುವನು ಅಂದನು. ಅವರು ಇದನ್ನು ಕೇಳಿ--ಹಾಗೆ ಎಂದಿಗೂ ಆಗಬಾರದು ಅಂದರು.

17ಆಗ ಆತನು ಅವರನ್ನು ನೋಡಿ--ಹಾಗಾದರೆ ಮನೇ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು ಎಂದು ಬರೆದಿರು ವದು ಏನು?

18ಯಾವನಾದರೂ ಆ ಕಲ್ಲಿನ ಮೇಲೆ ಬಿದ್ದರೆ ತುಂಡುತುಂಡಾಗುವನು. ಆದರೆ ಇದು ಯಾರ ಮೇಲೆ ಬೀಳುವದೋ ಅವನನ್ನು ಅದು ಅರೆದು ಪುಡಿಪುಡಿ ಮಾಡುವದು ಅಂದನು.

ಲೂಕನು 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी