ವಿಮೋಚನಕಾಂಡ 10:9

ಅದಕ್ಕೆ ಮೋಶೆಯು ಅವನಿಗೆ--ನಮ್ಮ ಚಿಕ್ಕವರನ್ನೂ ಮುದುಕರನ್ನೂ ಕರ ಕೊಂಡು ಹೋಗುವದಲ್ಲದೆ ನಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ನಮ್ಮ ಕುರಿಗಳನ್ನೂ ದನಗಳನ್ನೂ ತಕ್ಕೊಂಡು ಹೋಗುತ್ತೇವೆ. ಯಾಕಂದರೆ ನಾವು ಕರ್ತ ನಿಗಾಗಿ ಹಬ್ಬವನ್ನು ಮಾಡಬೇಕು ಅಂದನು.

ಸಂದರ್ಭದೊಂದಿಗೆ ಓದಿ · ವಿಮೋಚನಕಾಂಡ 10

7ಆಗ ಫರೋಹನ ಸೇವಕರು ಅವನಿಗೆ--ಇವನು ಎಷ್ಟು ಕಾಲ ನಮಗೆ ಉರುಲಾಗಿರಬೇಕು. ಆ ಜನರು ತಮ್ಮ ದೇವರಾದ ಕರ್ತನಿಗೆ ಸೇವೆಮಾಡುವಂತೆ ಅವರನ್ನು ಕಳುಹಿಸಿಬಿಡು. ಐಗುಪ್ತವು ನಾಶವಾಯಿ ತೆಂದು ನಿನಗೆ ಇನ್ನೂ ತಿಳಿಯಲಿಲ್ಲವೋ ಅಂದರು.

8ಮೋಶೆ ಆರೋನರು ಫರೋಹನ ಬಳಿಗೆ ಮತ್ತೆ ಕರೆಯಲ್ಪಟ್ಟರು. ಆಗ ಅವರಿಗೆ--ನೀವು ಹೋಗಿ ನಿಮ್ಮ ದೇವರಾದ ಕರ್ತನಿಗೆ ಸೇವೆಮಾಡಿರಿ; ಆದರೆ ಹೋಗು ವವರು ಯಾರಾರು ಅಂದನು.

9ಅದಕ್ಕೆ ಮೋಶೆಯು ಅವನಿಗೆ--ನಮ್ಮ ಚಿಕ್ಕವರನ್ನೂ ಮುದುಕರನ್ನೂ ಕರ ಕೊಂಡು ಹೋಗುವದಲ್ಲದೆ ನಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ನಮ್ಮ ಕುರಿಗಳನ್ನೂ ದನಗಳನ್ನೂ ತಕ್ಕೊಂಡು ಹೋಗುತ್ತೇವೆ. ಯಾಕಂದರೆ ನಾವು ಕರ್ತ ನಿಗಾಗಿ ಹಬ್ಬವನ್ನು ಮಾಡಬೇಕು ಅಂದನು.

10ಫರೋ ಹನು ಅವರಿಗೆ--ನಾನು ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಹೇಗೆ ಕಳುಹಿಸುವೆನೋ ಹಾಗೆಯೇ ಕರ್ತನು ನಿಮ್ಮ ಸಂಗಡ ಇರಲಿ. ನೋಡಿರಿ, ನಿಮ್ಮ ಮುಂದೆ ಕೇಡು ಇದೆ.

11ಹಾಗೆ ಮಾಡದೆ ಈಗ ಗಂಡಸರಾದ ನೀವು ಹೋಗಿ ಕರ್ತನಿಗೆ ಸೇವೆಮಾಡಿರಿ; ಇದನ್ನೇ ನೀವು ಬಯಸಿದಿರಿ ಅಂದನು. ತರುವಾಯ ಅವರು ಫರೋಹನ ಎದುರಿನಿಂದ ಹೊರದೂಡಲ್ಪಟ್ಟರು.

ವಿಮೋಚನಕಾಂಡ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी