ಲೂಕನು 8:4

ಆಗ ಪ್ರತಿಯೊಂದು ಪಟ್ಟಣದಿಂದ ಬಹು ಜನರು ಆತನ ಬಳಿಗೆ ಒಟ್ಟಾಗಿ ಸೇರಿ ಬರಲು ಆತನು ಒಂದು ಸಾಮ್ಯದಿಂದ--

ಸಂದರ್ಭದೊಂದಿಗೆ ಓದಿ · ಲೂಕನು 8

2ಇದಲ್ಲದೆ ದುರಾತ್ಮಗಳಿಂ ದಲೂ ರೋಗಗಳಿಂದಲೂ ಸ್ವಸ್ಥಮಾಡಲ್ಪಟ್ಟ ಕೆಲವು ಸ್ತ್ರೀಯರು ಮತ್ತು ಏಳು ದೆವ್ವಗಳು ಬಿಟ್ಟು ಹೋಗಿದ್ದ ಮಗ್ದಲಿನ ಎಂದು ಕರೆಯಲ್ಪಟ್ಟ ಮರಿಯಳೂ

3ಹೆರೋದನ ಮನೆವಾರ್ತೆಯವನಾದ ಕೂಜನ ಹೆಂಡತಿ ಯೋಹಾನಳೂ ಸುಸನ್ನಳೂ ಮತ್ತು ಬೇರೆ ಅನೇಕರು ತಮ್ಮ ಸೊತ್ತಿನಿಂದ ಆತನನ್ನು ಉಪಚರಿ ಸಿದವರು ಆತನೊಂದಿಗೆ ಇದ್ದರು.

4ಆಗ ಪ್ರತಿಯೊಂದು ಪಟ್ಟಣದಿಂದ ಬಹು ಜನರು ಆತನ ಬಳಿಗೆ ಒಟ್ಟಾಗಿ ಸೇರಿ ಬರಲು ಆತನು ಒಂದು ಸಾಮ್ಯದಿಂದ--

5ಬಿತ್ತುವವನು ಬೀಜವನ್ನು ಬಿತ್ತುವದಕ್ಕಾಗಿ ಹೊರಟು ಹೋದನು. ಅವನು ಬಿತ್ತಿದಾಗ ಕೆಲವು ದಾರಿಯ ಮಗ್ಗುಲಲ್ಲಿ ಬಿದ್ದು ತುಳಿಯಲ್ಪಟ್ಟವು; ಆಕಾಶದ ಪಕ್ಷಿಗಳು ಅವುಗಳನ್ನು ನುಂಗಿಬಿಟ್ಟವು.

6ಇದಲ್ಲದೆ ಕೆಲವು ಬಂಡೆಯ ಮೇಲೆ ಬಿದ್ದವು; ಮೊಳೆತ ಕೂಡಲೆ ತ್ಯಾವ ಇಲ್ಲದಿರುವ ಕಾರಣ ಒಣಗಿಹೋದವು.

ಲೂಕನು 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी