ಆಗ ಏನಾಯಿತಂದರೆ, ಅವರು ನ್ಯಾಯ ಪ್ರಮಾಣವನ್ನು ಕೇಳಿದಾಗ ಇಸ್ರಾಯೆಲ್ಯರೊಳಗಿಂದ ಬೆರಿಕೆಯಾದ ಜನರನ್ನು ಪ್ರತ್ಯೇಕಿಸಿದರು.
1ಅದೇ ದಿವಸದಲ್ಲಿ ಜನರು ಕೇಳುವ ಹಾಗೆ ಮೋಶೆಯ ಪುಸ್ತಕದೊಳಗೆ ಓದುವಾಗ ಅಮ್ಮೋನ್ಯರೂ ಮೋವಾಬ್ಯರೂ ಎಂದಿಗೂ ದೇವರ ಸಭೆಗೆ ಬರಕೂಡದೆಂದು ಅದರಲ್ಲಿ ಬರೆದದ್ದು ಸಿಕ್ಕಿತು.
2ಯಾಕಂದರೆ ಅವರು ರೊಟ್ಟಿಯನ್ನೂ ನೀರನ್ನೂ ತಂದು ಇಸ್ರಾಯೇಲ್ ಮಕ್ಕಳನ್ನು ಎದುರುಗೊಳ್ಳದೆ ಅವರನ್ನು ಶಪಿಸಿ ಅವರಿಗೆ ವಿರೋಧವಾಗಿ ಬಿಳಾಮ ನನ್ನು ಕೂಲಿಗೆ ಕರಕೊಂಡರು. ಆದರೆ ನಮ್ಮ ದೇವರು ಆ ಶಾಪವನ್ನು ಆಶೀರ್ವಾದವಾಗಿ ಮಾಡಿದನು ಅಂದನು.
3ಆಗ ಏನಾಯಿತಂದರೆ, ಅವರು ನ್ಯಾಯ ಪ್ರಮಾಣವನ್ನು ಕೇಳಿದಾಗ ಇಸ್ರಾಯೆಲ್ಯರೊಳಗಿಂದ ಬೆರಿಕೆಯಾದ ಜನರನ್ನು ಪ್ರತ್ಯೇಕಿಸಿದರು.
4ಇದಕ್ಕೆ ಮುಂಚೆ ನಮ್ಮ ದೇವರ ಆಲಯದ ಉಗ್ರಾಣದ ಮೇಲೆ ಇಡಲ್ಪಟ್ಟ ವಿಚಾರಕನಾದ ಎಲ್ಯಾಷೀಬನೆಂಬ ಯಾಜಕನು ಟೋಬೀಯನ ಸಂಗಡ ಬಂಧುತ್ವವನ್ನು ಮಾಡಿದ್ದು
5ಲೇವಿಯರಿಗೂ ಹಾಡುಗಾರರಿಗೂ ದ್ವಾರ ಪಾಲಕರಿಗೂ ನೇಮಿಸಲ್ಪಟ್ಟ ಕಾಣಿಕೆಗಳನ್ನೂ ಧೂಪ ವನ್ನೂ ಪಾತ್ರೆಗಳನ್ನೂ ಧಾನ್ಯದ ಹತ್ತನೇ ಪಾಲುಗ ಳನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಯಾಜಕರ ಕಾಣಿಕೆಗಳನ್ನೂ ಪೂರ್ವಕಾಲದಲ್ಲಿ ಇರಿಸುತ್ತಿದ್ದ ದೊಡ್ಡ ಕೊಠಡಿಯನ್ನು ಅವನಿಗೋಸ್ಕರ ಸಿದ್ಧಮಾಡಿದ್ದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ