ಅರಣ್ಯಕಾಂಡ 30:4

ಅವಳ ತಂದೆ ಅವಳ ಪ್ರಮಾಣವನ್ನೂ ಅವಳು ತನ್ನ ಪ್ರಾಣದ ಮೇಲೆ ಬಂಧಿಸಿಕೊಂಡದ್ದನ್ನೂ ಕೇಳಿ ಅದಕ್ಕೆ ಮೌನವಾಗಿರುವ ಪಕ್ಷದಲ್ಲಿ ಅವಳ ಪ್ರಮಾಣ ಗಳೆಲ್ಲವೂ ಅವಳು ತನ್ನ ಪ್ರಾಣದ ಮೇಲೆ ಮಾಡಿದ ಬಂಧನವೆಲ್ಲವೂ ನಿಲ್ಲುವವು.

ಸಂದರ್ಭದೊಂದಿಗೆ ಓದಿ · ಅರಣ್ಯಕಾಂಡ 30

2ಒಬ್ಬನು ಕರ್ತನಿಗೆ ಪ್ರಮಾಣವನ್ನು ಮಾಡಿದರೆ ಇಲ್ಲವೆ ಕಟ್ಟಳೆಯಿಂದ ತನ್ನ ಪ್ರಾಣವನ್ನು ಬಾಧಿಸುವ ಆಣೆ ಇಟ್ಟುಕೊಂಡರೆ ಅವನು ತನ್ನ ಮಾತನ್ನು ತಪ್ಪಿಸಬಾರದು, ಬಾಯಿಂದ ಹೊರಟ ಎಲ್ಲಾದರ ಪ್ರಕಾರ ಮಾಡಬೇಕು.

3ಸ್ತ್ರೀಯು ಕರ್ತನಿಗೆ ಪ್ರಮಾಣಮಾಡಿ ತನ್ನ ಕನ್ಯಾ ವಸ್ಥೆಯಲ್ಲಿ ತಂದೆಯ ಮನೆಯಲ್ಲಿ ಬಂಧಿಸಿಕೊಂಡರೆ

4ಅವಳ ತಂದೆ ಅವಳ ಪ್ರಮಾಣವನ್ನೂ ಅವಳು ತನ್ನ ಪ್ರಾಣದ ಮೇಲೆ ಬಂಧಿಸಿಕೊಂಡದ್ದನ್ನೂ ಕೇಳಿ ಅದಕ್ಕೆ ಮೌನವಾಗಿರುವ ಪಕ್ಷದಲ್ಲಿ ಅವಳ ಪ್ರಮಾಣ ಗಳೆಲ್ಲವೂ ಅವಳು ತನ್ನ ಪ್ರಾಣದ ಮೇಲೆ ಮಾಡಿದ ಬಂಧನವೆಲ್ಲವೂ ನಿಲ್ಲುವವು.

5ಆದರೆ ಅವಳ ತಂದೆ ಕೇಳಿದ ದಿವಸದಲ್ಲಿ ಅವಳನ್ನು ತಡೆದರೆ ಅವಳ ಎಲ್ಲಾ ಪ್ರಮಾಣಗಳೂ ಅವಳು ತನ್ನ ಪ್ರಾಣದ ಮೇಲೆ ಇಟ್ಟುಕೊಂಡ ಎಲ್ಲಾ ಬಂಧನಗಳೂ ನಿಲ್ಲವು; ಅವಳ ತಂದೆ ಅವಳಿಗೆ ತಡೆದ ಕಾರಣ ಕರ್ತನು ಅವಳನ್ನು ಕ್ಷಮಿಸುವನು.

6ಆದರೆ ಅವಳಿಗೆ ಗಂಡನಿರುವ ವೇಳೆಯಲ್ಲಿ ಅವಳ ಮೇಲೆ ಪ್ರಮಾಣಗಳು ಇಲ್ಲವೆ ಪ್ರಾಣವನ್ನು ಬಂಧಿ ಸುವ ಬಾಯಿಂದ ಬಂದ ಮಾತು ಇದ್ದರೆ

ಅರಣ್ಯಕಾಂಡ 30 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी