ಜೆಕರ್ಯ 6:11

ಬೆಳ್ಳಿಬಂಗಾರವನ್ನು ತಕ್ಕೊಂಡು ಕಿರೀಟಗಳನ್ನು ಮಾಡಿ ಅವುಗಳನ್ನು ಯೆಹೋಚಾದಾಕನ ಮಗನಾದ ಪ್ರಧಾನ ಯಾಜಕ ನಾದ ಯೆಹೋಶುವನ ತಲೆಯ ಮೇಲೆ ಇಟ್ಟು

ಸಂದರ್ಭದೊಂದಿಗೆ ಓದಿ · ಜೆಕರ್ಯ 6

9ಇದಲ್ಲದೆ ಕರ್ತನ ವಾಕ್ಯವು ನನಗೆ ಉಂಟಾಯಿತು.

10ಹೇಗಂದರೆ--ಆ ಸೆರೆಯವರಿಂದ ಅಂದರೆ ಬಾಬೆಲಿ ನಿಂದ ಬಂದಿರುವ ಹೆಲ್ದಾಯನಿಂದಲೂ ತೋಬೀಯ ನಿಂದಲೂ ಯೆದಾಯನಿಂದಲೂ ತಕ್ಕೊಂಡು ಅದೇ ದಿವಸದಲ್ಲಿ ನೀನು ಬಂದು ಚೆಫನ್ಯನ ಮಗನಾದ ಯೋಷೀಯನ ಮನೆಗೆ ಹೋಗಿ

11ಬೆಳ್ಳಿಬಂಗಾರವನ್ನು ತಕ್ಕೊಂಡು ಕಿರೀಟಗಳನ್ನು ಮಾಡಿ ಅವುಗಳನ್ನು ಯೆಹೋಚಾದಾಕನ ಮಗನಾದ ಪ್ರಧಾನ ಯಾಜಕ ನಾದ ಯೆಹೋಶುವನ ತಲೆಯ ಮೇಲೆ ಇಟ್ಟು

12ಅವನಿಗೆ ಹೇಳತಕ್ಕದ್ದೇನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಚಿಗುರೆಂದು ಹೆಸರುಳ್ಳ ಮನುಷ್ಯನು, ಅವನು ತನ್ನ ಸ್ಥಳದೊಳಗಿಂದ ಚಿಗುರು ವನು, ಆತನೇ ಕರ್ತನ ದೇವಾಲಯವನ್ನು ಕಟ್ಟುವನು.

13ಹೌದು, ಆತನು ಕರ್ತನ ದೇವಾಲಯವನ್ನು ಕಟ್ಟು ವನು; ಆತನು ಮಹಿಮೆಯನ್ನು ಧರಿಸುವನು; ಕೂತು ಕೊಂಡು ತನ್ನ ಸಿಂಹಾಸನದಲ್ಲಿ ಆಳುವನು, ತನ್ನ ಸಿಂಹಾಸನದಲ್ಲಿ ಯಾಜಕನಾಗಿರುವನು; ಸಮಾಧಾನದ ಆಲೋಚನೆ ಅವರಿಬ್ಬರೊಳಗೆ ಇರುವದು.

ಜೆಕರ್ಯ 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी