ನಹೂಮ 3:11

ನೀನು ಸಹ ಅಮಲೇರಿದ್ದೀ, ಅಡಗಿಕೊಳ್ಳುವಿ; ನೀನು ಸಹ ಶತ್ರುವಿನ ನಿಮಿತ್ತ ತ್ರಾಣ ವನ್ನು ಹುಡುಕುವಿ.

ಸಂದರ್ಭದೊಂದಿಗೆ ಓದಿ · ನಹೂಮ 3

9ಕೂಷೂ ಐಗುಪ್ತವೂ ಅದರ ಬಲ ವಾಗಿದ್ದವು; ಮತ್ತು ಲೆಕ್ಕವಿಲ್ಲದ್ದಾಗಿತ್ತು; ಪೂಟರೂ ಲೂಬ್ಯರೂ ನಿನ್ನ ಸಹಾಯಕರಾಗಿದ್ದರು.

10ಆದರೆ ಅದು ಸೆರೆಯಾಗಿ ದೇಶಾಂತರಕ್ಕೆ ಹೋಯಿತು; ಅದರ ಕೂಸುಗಳು ಸಹ ಎಲ್ಲಾ ಬೀದಿಗಳ ತುದಿಗಳಲ್ಲಿ ಜಜ್ಜ ಲ್ಪಟ್ಟವು; ಅದರ ಘನವುಳ್ಳವರಿಗೋಸ್ಕರ ಚೀಟು ಹಾಕಿದರು; ಅದರ ಮಹನೀಯರೆಲ್ಲರೂ ಸಂಕೋಲೆ ಗಳಿಂದ ಕಟ್ಟಲ್ಪಟ್ಟರು.

11ನೀನು ಸಹ ಅಮಲೇರಿದ್ದೀ, ಅಡಗಿಕೊಳ್ಳುವಿ; ನೀನು ಸಹ ಶತ್ರುವಿನ ನಿಮಿತ್ತ ತ್ರಾಣ ವನ್ನು ಹುಡುಕುವಿ.

12ನಿನ್ನ ಕೋಟೆಗಳೆಲ್ಲಾ ಮೊದಲನೇ ಹಣ್ಣುಗಳುಳ್ಳ ಅಂಜೂರದ ಗಿಡಗಳ ಹಾಗಿರುವವು; ಅಲ್ಲಾಡಿಸಲ್ಪಟ್ಟರೆ ತಿನ್ನುವವನ ಬಾಯಲ್ಲಿಯೇ ಬೀಳುವವು.

13ಇಗೋ, ನಿನ್ನ ಮಧ್ಯದಲ್ಲಿರುವ ನಿನ್ನ ಜನರು ಹೆಂಗಸರ ಹಾಗಿದ್ದಾರೆ; ನಿನ್ನ ದೇಶದ ಬಾಗಲುಗಳು ನಿನ್ನ ಶತ್ರುಗಳಿಗೆ ಅಗಲವಾಗಿ ತೆರೆಯಲ್ಪಡುವವು; ಬೆಂಕಿ ನಿನ್ನ ಅಗುಳಿಗಳನ್ನು ತಿಂದುಬಿಡುವದು.

ನಹೂಮ 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी