ಆದಿಕಾಂಡ 50:15

ತಮ್ಮ ತಂದೆ ಸತ್ತುಹೋದದ್ದನ್ನು ಯೋಸೇಫನ ಸಹೋದರರು ನೋಡಿ--ಒಂದು ವೇಳೆ ಯೋಸೇಫನು ನಮ್ಮನ್ನು ಹಗೆಮಾಡಿ ನಾವು ಅವನಿಗೆ ಮಾಡಿದ್ದ ಎಲ್ಲಾ ಕೇಡಿಗೆ ನಿಶ್ಚಯವಾಗಿ ಪ್ರತೀಕಾರ ಮಾಡಾನು ಎಂದು ಅಂದುಕೊಂಡು

ಸಂದರ್ಭದೊಂದಿಗೆ ಓದಿ · ಆದಿಕಾಂಡ 50

13ಅವನ ಕುಮಾರರು ಅವನನ್ನು ಕಾನಾನ್‌ ದೇಶಕ್ಕೆ ತಕ್ಕೊಂಡು ಹೋಗಿ ಅಬ್ರಹಾಮನು ಸ್ವಂತ ಸಮಾಧಿಗೋಸ್ಕರ ಹಿತ್ತಿಯನಾದ ಎಫ್ರೋನಿ ನಿಂದ ಕೊಂಡುಕೊಂಡಿದ್ದ ಮಮ್ರೆಗೆ ಎದುರಾಗಿರುವ ಮಕ್ಪೇಲ ಹೊಲದ ಗವಿಯಲ್ಲಿ ಹೂಣಿಟ್ಟರು.

14ಯೋಸೇಫನು ತನ್ನ ತಂದೆಯನ್ನು ಹೂಣಿಟ್ಟ ಮೇಲೆ ತನ್ನ ಸಹೋದರರ ಸಂಗಡಲೂ ತನ್ನ ತಂದೆಯನ್ನು ಹೂಣಿಡುವದಕ್ಕಾಗಿ ಅವನ ಸಂಗಡ ಹೋದವರೆಲ್ಲರ ಸಂಗಡಲೂ ಐಗುಪ್ತಕ್ಕೆ ತಿರಿಗಿ ಬಂದನು.

15ತಮ್ಮ ತಂದೆ ಸತ್ತುಹೋದದ್ದನ್ನು ಯೋಸೇಫನ ಸಹೋದರರು ನೋಡಿ--ಒಂದು ವೇಳೆ ಯೋಸೇಫನು ನಮ್ಮನ್ನು ಹಗೆಮಾಡಿ ನಾವು ಅವನಿಗೆ ಮಾಡಿದ್ದ ಎಲ್ಲಾ ಕೇಡಿಗೆ ನಿಶ್ಚಯವಾಗಿ ಪ್ರತೀಕಾರ ಮಾಡಾನು ಎಂದು ಅಂದುಕೊಂಡು

16ಅವರು ಒಬ್ಬ ಸೇವಕನನ್ನು ಕಳುಹಿಸಿ ಯೋಸೇಫನಿಗೆ ಹೇಳಿದ್ದೇನಂದರೆ--ನಿನ್ನ ತಂದೆಯು ಸಾಯುವದಕ್ಕಿಂತ ಮುಂಚೆ

17ನಿನ್ನ ಸಹೋದರರ ಅಪರಾಧವನ್ನೂ ಅವರ ಪಾಪವನ್ನೂ ಮನ್ನಿಸು ಎಂಬದಾಗಿ ಯೋಸೇಫನಿಗೆ ಹೇಳಿರಿ ಎಂದು ಆಜ್ಞಾಪಿಸಿದ್ದಾನೆ. ಹೀಗಿರುವದರಿಂದ ನಿನ್ನ ತಂದೆಯ ದೇವರ ದಾಸರಾದ ನಾವು ಮಾಡಿದ ಅಪರಾಧವನ್ನು ಕ್ಷಮಿಸು ಅಂದರು. ಹೀಗೆ ಅವರು ಯೋಸೇಫನ ಸಂಗಡ ಮಾತನಾಡುತ್ತಿರುವಾಗ ಅವನು ಅತ್ತನು.

ಆದಿಕಾಂಡ 50 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी