ಯೆಹೆಜ್ಕೇಲನು 10:9

ನಾನು ನೋಡಿದಾಗ ಇಗೋ, ಒಬ್ಬೊಬ್ಬ ಕೆರೂ ಬಿಯನ ಬಳಿಯಲ್ಲಿ ಒಂದು ಚಕ್ರ, ಈ ಪ್ರಕಾರ ಕೆರೂಬಿಯರ ಬಳಿಯಲ್ಲಿ ನಾಲ್ಕು ಚಕ್ರಗಳಿದ್ದವು; ಆ ಚಕ್ರಗಳ ವರ್ಣವು ಪೀತರತ್ನದ ಹಾಗೆ ಇತ್ತು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 10

7ಒಬ್ಬ ಕೆರೂಬಿಯನು ಕೆರೂಬಿಯರ ಮಧ್ಯದೊಳಗಿಂದ ತನ್ನ ಕೈಯನ್ನು ಕೆರೂಬಿಯರ ಮಧ್ಯದೊಳಗಿರುವ ಬೆಂಕಿಗೆ ಚಾಚಿ, ತಕ್ಕೊಂಡು ನಾರುಮಡಿಯನ್ನು ಧರಿಸಿಕೊಂಡಿ ದ್ದವನ ಕೈಗೆ ಇಟ್ಟನು. ಇವನು ಅದನ್ನು ತೆಗೆದುಕೊಂಡು ಹೊರಗೆ ಹೋದನು.

8ಕೆರೂಬಿಯರಲ್ಲಿ ಅವರ ರೆಕ್ಕೆ ಗಳ ಕೆಳಗೆ ಮನುಷ್ಯನ ಕೈಗೆ ಸಮಾನವಾದದ್ದು ಕಂಡುಬಂತು.

9ನಾನು ನೋಡಿದಾಗ ಇಗೋ, ಒಬ್ಬೊಬ್ಬ ಕೆರೂ ಬಿಯನ ಬಳಿಯಲ್ಲಿ ಒಂದು ಚಕ್ರ, ಈ ಪ್ರಕಾರ ಕೆರೂಬಿಯರ ಬಳಿಯಲ್ಲಿ ನಾಲ್ಕು ಚಕ್ರಗಳಿದ್ದವು; ಆ ಚಕ್ರಗಳ ವರ್ಣವು ಪೀತರತ್ನದ ಹಾಗೆ ಇತ್ತು.

10ಅವುಗಳ ಆಕಾರವು ನಾಲ್ಕಕ್ಕೂ ಒಂದೇ ರೂಪ ವಿತ್ತು; ಚಕ್ರದಲ್ಲಿ ಚಕ್ರವು ಇದ್ದ ಹಾಗೆ ಇದ್ದವು.

11ಅವು ಹೋಗುತ್ತಿರುವಾಗ ಅವುಗಳು ನಾಲ್ಕು ಕಡೆಗಳಲ್ಲೂ ಹೋಗುತ್ತಿದ್ದವು. ಹೋಗುವಾಗ ತಿರುಗಿ ಕೊಳ್ಳಲಿಲ್ಲ. ಆದರೆ ಅವುಗಳ ತಲೆ ಯಾವ ಸ್ಥಳವನ್ನು ನೋಡುತ್ತಿತ್ತೋ ಅಲ್ಲಿಗೆ ಅದರ ಹಿಂದೆಯೇ ಹೋದವು, ಹೋಗುವಾಗ ತಿರುಗಲಿಲ್ಲ.

ಯೆಹೆಜ್ಕೇಲನು 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी