೨ ಸಮುವೇಲನು 15:25

ಆಗ ಅರಸನು ಚಾದೋಕನಿಗೆ--ದೇವರ ಮಂಜೂಷವನ್ನು ಪಟ್ಟಣಕ್ಕೆ ತಿರಿಗಿ ತಕ್ಕೊಂಡು ಹೋಗು. ಕರ್ತನ ದೃಷ್ಟಿಯಲ್ಲಿ ಮುಂದೆ ನನಗೆ ಕೃಪೆ ದೊರಕಿದರೆ ಆತನು ನನ್ನನ್ನು ತಿರಿಗಿ ಬರಮಾಡಿ ಅದನ್ನೂ ಅದರ ವಾಸಸ್ಥಳವನ್ನೂ ನನಗೆ ತೋರಿಸುವನು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 15

23ಅರಸನು ಕಿದ್ರೋನ್‌ ಹಳ್ಳವನ್ನು ದಾಟಿದನು; ಹಾಗೆಯೇ ಅವನ ಜನರೆಲ್ಲರೂ ದಾಟಿ ಅರಣ್ಯದ ಮಾರ್ಗವಾಗಿ ನಡೆದು ಹೋದರು.

24ಇಗೋ, ಚಾದೋಕನೂ ಅವನ ಸಂಗಡ ಇರುವ ಎಲ್ಲಾ ಲೇವಿಯರೂ ದೇವರ ಒಡಂಬಡಿಕೆಯ ಮಂಜೂ ಷವನ್ನು ಹೊತ್ತುಕೊಂಡು ಬಂದು ಇಳಿಸಿದರು. ಆದರೆ ಎಬ್ಯಾತಾರನು ಜನರೆಲ್ಲರು ಪಟ್ಟಣದಿಂದ ದಾಟಿ ಹೋಗುವ ವರೆಗೆ ಮುಂದೆ ನಡೆಯುತ್ತಿದ್ದನು.

25ಆಗ ಅರಸನು ಚಾದೋಕನಿಗೆ--ದೇವರ ಮಂಜೂಷವನ್ನು ಪಟ್ಟಣಕ್ಕೆ ತಿರಿಗಿ ತಕ್ಕೊಂಡು ಹೋಗು. ಕರ್ತನ ದೃಷ್ಟಿಯಲ್ಲಿ ಮುಂದೆ ನನಗೆ ಕೃಪೆ ದೊರಕಿದರೆ ಆತನು ನನ್ನನ್ನು ತಿರಿಗಿ ಬರಮಾಡಿ ಅದನ್ನೂ ಅದರ ವಾಸಸ್ಥಳವನ್ನೂ ನನಗೆ ತೋರಿಸುವನು.

26ಒಂದು ವೇಳೆ ಆತನು--ನಿನ್ನಲ್ಲಿ ನನಗೆ ಇಷ್ಟವಿಲ್ಲವೆಂದು ಹೇಳಿ ದರೆ ಇಗೋ, ಆತನು ತನ್ನ ದೃಷ್ಟಿಗೆ ಯುಕ್ತವಾದ ಹಾಗೆ ನನಗೆ ಮಾಡಲಿ ಅಂದನು.

27ಅರಸನು ಯಾಜಕ ನಾದ ಚಾದೋಕನಿಗೆ--ನೀನು ದರ್ಶಿಯಲ್ಲವೇ? ನೀನು ಸಮಾಧಾನದಿಂದ ಪಟ್ಟಣಕ್ಕೆ ತಿರಿಗಿ ಹೋಗು; ಇದಲ್ಲದೆ ನಿನ್ನ ಇಬ್ಬರು ಮಕ್ಕಳಾದ ಅಹೀಮಾಚನೂ ಎಬ್ಯಾತಾರನ ಮಗನಾದ ಯೋನಾತಾನನೂ ನಿನ್ನ ಸಂಗಡ ಹೋಗಲಿ.

೨ ಸಮುವೇಲನು 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी