೨ ಸಮುವೇಲನು 22:5

ಮರಣದಲೆಗಳು ನನ್ನನ್ನು ಆವರಿಸಿಕೊಂಡವು; ಭಕ್ತಿಹೀನರ ಪ್ರವಾಹಗಳು ನನ್ನನ್ನು ಹೆದರಿಸಿದವು;

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 22

3ನನ್ನ ಬಂಡೆಯಾದ ದೇವರಲ್ಲಿ ನಾನು ಭರವಸ ವಿಡುವೆನು; ಆತನು ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ಉನ್ನತ ಗೋಪುರವೂ ನನ್ನ ಆಶ್ರಯವೂ ನನ್ನ ರಕ್ಷಕನೂ ಆಗಿದ್ದಾನೆ. ನೀನು ಬಲಾತ್ಕಾರಿಯಿಂದ ನನ್ನನ್ನು ರಕ್ಷಿಸುತ್ತೀ.

4ಸ್ತುತಿಗೆ ಯೋಗ್ಯನಾದ ಕರ್ತ ನನ್ನು ನಾನು ಕೂಗುತ್ತೇನೆ; ಹೀಗೆ ನಾನು ನನ್ನ ಶತ್ರು ಗಳೊಳಗಿಂದ ರಕ್ಷಿಸಲ್ಪಡುತ್ತೇನೆ.

5ಮರಣದಲೆಗಳು ನನ್ನನ್ನು ಆವರಿಸಿಕೊಂಡವು; ಭಕ್ತಿಹೀನರ ಪ್ರವಾಹಗಳು ನನ್ನನ್ನು ಹೆದರಿಸಿದವು;

6ಪಾತಾಳದ ದುಃಖಗಳು ನನ್ನನ್ನು ಸುತ್ತಿಕೊಂಡವು; ಮರಣದ ಉರ್ಲುಗಳು ನನ್ನನ್ನು ಎದುರುಗೊಂಡವು;

7ನನ್ನ ಇಕ್ಕಟ್ಟಿನಲ್ಲಿ ಕರ್ತ ನನ್ನು ಕರೆದೆನು; ನನ್ನ ದೇವರನ್ನು ಕರೆದೆನು. ಆತನು ತನ್ನ ಮಂದಿರದೊಳಗಿಂದ ನನ್ನ ಶಬ್ದವನ್ನು ಕೇಳಿದನು; ನನ್ನ ಮೊರೆಯು ಆತನ ಕಿವಿಗೆ ಮುಟ್ಟಿತು.

೨ ಸಮುವೇಲನು 22 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी