ಧರ್ಮೋಪದೇಶಕಾಂಡ 31:15

ಆಗ ಕರ್ತನು ಗುಡಾರದೊಳಗೆ ಮೇಘಸ್ತಂಭದಲ್ಲಿ ಕಾಣಿಸಿ ಕೊಂಡನು; ಆ ಮೇಘಸ್ತಂಭವು ಗುಡಾರದ ಬಾಗಲಿನ ಮೇಲೆ ನಿಂತಿತು.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 31

13ತಿಳಿಯದಿರುವ ಅವರ ಮಕ್ಕಳು ಸಹ ಕೇಳಿ ನೀವು ಸ್ವಾಧೀನಮಾಡಿಕೊಳ್ಳುವ ದಕ್ಕೆ ಯೊರ್ದನನ್ನು ದಾಟುವ ಭೂಮಿಯಲ್ಲಿ ನೀವು ಬದುಕುವ ದಿವಸಗಳೆಲ್ಲಾ ನಿಮ್ಮ ದೇವರಾದ ಕರ್ತನಿಗೆ ಭಯಪಡುವದಕ್ಕೆ ಕಲಿತುಕೊಳ್ಳಲಿ ಎಂದು ಆಜ್ಞಾಪಿಸಿ ಹೇಳಬೇಕು.

14ಇದಲ್ಲದೆ ಕರ್ತನು ಮೋಶೆಗೆ--ಇಗೋ, ನೀನು ಸಾಯುವ ದಿನಗಳು ಸವಿಾಪವಾದವು. ಯೆಹೋಶುವ ನನ್ನು ಕರೆದು ನೀವು ಸಭೆಯ ಗುಡಾರದಲ್ಲಿ ನಿಂತು ಕೊಳ್ಳಿರಿ; ಆಗ ಅವನಿಗೆ ಆಜ್ಞೆ ಕೊಡುವೆನು ಅಂದನು. ಈ ಪ್ರಕಾರ ಮೋಶೆಯೂ ಯೆಹೋಶುವನೂ ಹೋಗಿ ಸಭೆಯ ಗುಡಾರದಲ್ಲಿ ನಿಂತುಕೊಂಡರು.

15ಆಗ ಕರ್ತನು ಗುಡಾರದೊಳಗೆ ಮೇಘಸ್ತಂಭದಲ್ಲಿ ಕಾಣಿಸಿ ಕೊಂಡನು; ಆ ಮೇಘಸ್ತಂಭವು ಗುಡಾರದ ಬಾಗಲಿನ ಮೇಲೆ ನಿಂತಿತು.

16ಆಗ ಕರ್ತನು ಮೋಶೆಗೆ--ನೀನು ನಿನ್ನ ಪಿತೃಗಳ ಸಂಗಡ ಮಲಗುವಿ; ಈ ಜನರು ಎದ್ದು ತಾವು ಪ್ರವೇಶಿಸುವ ದೇಶದ ಅನ್ಯದೇವರುಗಳನ್ನು ಅನುಸರಿಸಿ ಜಾರತ್ವಮಾಡಿ ನನ್ನನ್ನು ಬಿಟ್ಟು ನಾನು ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ವಿಾರುವರು.

17ಆ ದಿವಸದಲ್ಲಿ ನನ್ನ ಕೋಪವು ಅವರ ಮೇಲೆ ಉರಿಯು ವದು. ನಾನು ಅವರನ್ನು ಬಿಟ್ಟುಬಿಟ್ಟು ನನ್ನ ಮುಖವನ್ನು ಅವರಿಗೆ ಮರೆಮಾಡುವೆನು; (ವಿರೋಧಿಗಳು) ಅವ ರನ್ನು ನುಂಗಿ ಬಿಡುವರು; ಬಹಳ ಕೇಡುಗಳೂ ಇಕ್ಕಟ್ಟು ಗಳೂ ಅವರಿಗೆ ಸಂಭವಿಸುವವು; ಆ ದಿವಸದಲ್ಲಿ ಅವರು--ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದ ಕಾರಣ ಈ ಕೇಡುಗಳು ನಮ್ಮನ್ನು ಹಿಡಿದವಲ್ಲಾ ಎಂದು ಹೇಳುವರು.

ಧರ್ಮೋಪದೇಶಕಾಂಡ 31 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी