೨ ಅರಸುಗಳು 10:11

ಈ ಪ್ರಕಾರ ಯೇಹುವು ಅಹಾಬನಿಗೆ ಯಾರನ್ನೂ ಉಳಿಯಗೊಡಿಸದೆ ಇರುವ ವರೆಗೂ ಇಜ್ರೇಲಿನಲ್ಲಿ ಅವನಿಗೆ ಉಳಿದ ಎಲ್ಲಾ ಮನೆಯವರನ್ನೂ ಅವನ ಎಲ್ಲಾ ಹಿರಿಯರನ್ನೂ ನೆಂಟರನ್ನೂ ಯಾಜಕರನ್ನೂ ಸಂಹರಿಸಿದನು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 10

9ಉದಯ ಕಾಲದಲ್ಲಿ ಏನಾಯಿತೆಂದರೆ, ಅವನು ಹೊರಟು ನಿಂತು ಎಲ್ಲಾ ಜನರಿಗೆ ಹೇಳಿದ್ದೇನಂದರೆ -- ನೀವು ನೀತಿವಂತರು; ಇಗೋ, ನಾನು ನನ್ನ ಯಜಮಾನನ ಮೇಲೆ ಒಳಸಂಚು ಮಾಡಿ ಅವನನ್ನು ಕೊಂದುಹಾಕಿದೆನು.

10ಆದರೆ ಇವರೆಲ್ಲರನ್ನು ಸಂಹರಿಸಿದವರಾರು? ಕರ್ತನು ಅಹಾ ಬನ ಮನೆಯನ್ನು ಕುರಿತು ಹೇಳಿದ ಕರ್ತನ ಮಾತು ಗಳಲ್ಲಿ ಒಂದೂ ವ್ಯರ್ಥವಾಗುವದಿಲ್ಲವೆಂದು ನೀವು ತಿಳಿದುಕೊಳ್ಳಿರಿ. ಕರ್ತನು ತನ್ನ ಸೇವಕನಾದ ಎಲೀಯನ ಮುಖಾಂತರ ಹೇಳಿದ್ದನ್ನು ನೆರವೇರಿಸಿದ್ದಾನೆ ಅಂದನು.

11ಈ ಪ್ರಕಾರ ಯೇಹುವು ಅಹಾಬನಿಗೆ ಯಾರನ್ನೂ ಉಳಿಯಗೊಡಿಸದೆ ಇರುವ ವರೆಗೂ ಇಜ್ರೇಲಿನಲ್ಲಿ ಅವನಿಗೆ ಉಳಿದ ಎಲ್ಲಾ ಮನೆಯವರನ್ನೂ ಅವನ ಎಲ್ಲಾ ಹಿರಿಯರನ್ನೂ ನೆಂಟರನ್ನೂ ಯಾಜಕರನ್ನೂ ಸಂಹರಿಸಿದನು.

12ಅವನು ಎದ್ದು ಹೊರಟು ಸಮಾರ್ಯಕ್ಕೆ ಬಂದನು. ಯೇಹುವು ದಾರಿಯಲ್ಲಿರುವ ಕುರುಬರು ಉಣ್ಣೆ ಕತ್ತರಿಸುವ ಮನೆಯ ಬಳಿಗೆ ಬಂದಾಗ

13ಯೆಹೂ ದದ ಅರಸನಾದ ಅಹಜ್ಯನ ಸಹೋದರರನ್ನು ಕಂಡು ಅವರಿಗೆ--ನೀವು ಯಾರು ಅಂದನು. ಅದಕ್ಕವರು--ನಾವು ಅಹಜ್ಯನ ಸಹೋದರರು; ಅರಸನ ಮಕ್ಕ ಳನ್ನೂ ರಾಣಿಯ ಮಕ್ಕಳನ್ನೂ ವಂದಿಸಲು ಹೋಗುತ್ತೇವೆ ಅಂದರು.

೨ ಅರಸುಗಳು 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी