೨ ಸಮುವೇಲನು 18:18

ಆದರೆ ಅಬ್ಷಾಲೋಮನು ಜೀವ ದಿಂದಿರುವಾಗ--ನನ್ನ ಹೆಸರನ್ನು ಜ್ಞಾಪಕಮಾಡುವ ಹಾಗೆ ನನಗೆ ಮಗನಿಲ್ಲವೆಂದು ಹೇಳಿ ಅರಸನ ತಗ್ಗಿನ ಲ್ಲಿರುವ ಒಂದು ಸ್ತಂಭವನ್ನು ತಕ್ಕೊಂಡು ತನಗೋಸ್ಕರ ನಿಲ್ಲಿಸಿ ಆ ಸ್ತಂಭಕ್ಕೆ ತನ್ನ ಹೆಸರನ್ನಿಟ್ಟನು. ಅದು ಈ ದಿನದ ವರೆಗೂ ಅಬ್ಷಾಲೋಮನ ಸ್ಥಳ ಎಂದು ಹೇಳಲ್ಪಡುವದು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 18

16ಯೋವಾಬನು ತುತೂರಿಯನ್ನು ಊದಿದ್ದರಿಂದ ಜನರು ಇಸ್ರಾಯೇಲ್ಯರನ್ನು ಹಿಂದಟ್ಟುವದನ್ನು ಬಿಟ್ಟು ಹಿಂತಿರುಗಿದರು.

17ಯೋವಾಬನು ಜನರನ್ನು ತಡೆ ದನು. ಅವರು ಅಬ್ಷಾಲೋಮನನ್ನು ತಕ್ಕೊಂಡು ಅಡವಿ ಯಲ್ಲಿರುವ ಒಂದು ದೊಡ್ಡ ಕುಣಿಯಲ್ಲಿ ಹಾಕಿ ಅವನ ಮೇಲೆ ದೊಡ್ಡ ಕಲ್ಲಿನ ಕುಪ್ಪೆಯನ್ನು ಹಾಕಿದರು. ಆಗ ಇಸ್ರಾಯೇಲ್ಯರೆಲ್ಲರೂ ತಮ್ಮ ಗುಡಾರಗಳಿಗೆ ಓಡಿ ಹೋದರು.

18ಆದರೆ ಅಬ್ಷಾಲೋಮನು ಜೀವ ದಿಂದಿರುವಾಗ--ನನ್ನ ಹೆಸರನ್ನು ಜ್ಞಾಪಕಮಾಡುವ ಹಾಗೆ ನನಗೆ ಮಗನಿಲ್ಲವೆಂದು ಹೇಳಿ ಅರಸನ ತಗ್ಗಿನ ಲ್ಲಿರುವ ಒಂದು ಸ್ತಂಭವನ್ನು ತಕ್ಕೊಂಡು ತನಗೋಸ್ಕರ ನಿಲ್ಲಿಸಿ ಆ ಸ್ತಂಭಕ್ಕೆ ತನ್ನ ಹೆಸರನ್ನಿಟ್ಟನು. ಅದು ಈ ದಿನದ ವರೆಗೂ ಅಬ್ಷಾಲೋಮನ ಸ್ಥಳ ಎಂದು ಹೇಳಲ್ಪಡುವದು.

19ಆಗ ಚಾದೋಕನ ಮಗನಾದ ಅಹೀಮಾಚನುಕರ್ತನು ರಾಜನ ಶತ್ರುಗಳ ಮೇಲೆ ಹೇಗೆ ನ್ಯಾಯ ತೀರಿಸಿದ್ದಾನೆಂಬ ವರ್ತಮಾನಗಳನ್ನು ಅರಸನಿಗೆ ತಿಳಿ ಸುವ ಹಾಗೆ ನಾನು ಓಡಿಹೋಗುವದಕ್ಕೆ ಅಪ್ಪಣೆಯಾಗ ಬೇಕು ಅಂದನು.

20ಯೋವಾಬನು ಅವನಿಗೆ--ನೀನು ಈ ಹೊತ್ತು ವರ್ತಮಾನ ತಕ್ಕೊಂಡು ಹೋಗಬೇಡ; ಮತ್ತೊಂದು ದಿವಸ ವರ್ತಮಾನ ತಕ್ಕೊಂಡು ಹೋಗ ಬಹುದು. ಅರಸನ ಮಗನು ಸತ್ತದ್ದರಿಂದ ಈ ಹೊತ್ತು ನೀನು ವರ್ತಮಾನ ತಕ್ಕೊಂಡು ಹೋಗ ಬೇಡ ಅಂದನು.

೨ ಸಮುವೇಲನು 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी