ಸಮುವೇಲನು ಹೋಗುವದ ಕ್ಕೋಸ್ಕರ ತಿರುಗಿಕೊಳ್ಳುವಾಗ ಸೌಲನು ಅವನ ವಸ್ತ್ರದ ಕೊನೆಯನ್ನು ಹಿಡುಕೊಂಡನು. ಆಗ ಅದು ಹರಿದು ಹೋಯಿತು.
25ಆದದರಿಂದ ಈಗ ದಯಮಾಡಿ ನನ್ನ ಪಾಪವನ್ನು ಕ್ಷಮಿಸಿ ನಾನು ಕರ್ತನನ್ನು ಆರಾಧಿಸುವ ಹಾಗೆ ನನ್ನ ಸಂಗಡ ತಿರಿಗಿ ಬಾ ಎಂದು ಬೇಡಿಕೊಂಡನು.
26ಆದಕ್ಕೆ ಸಮುವೇಲನು ಸೌಲನಿಗೆ--ನಾನು ನಿನ್ನ ಸಂಗಡ ಹಿಂತಿರುಗಿ ಬರುವದಿಲ್ಲ; ಯಾಕಂದರೆ ನೀನು ಕರ್ತನ ವಾಕ್ಯವನ್ನು ತಿರಸ್ಕಾರಮಾಡಿದಿ; ಕರ್ತನು ನಿನ್ನನ್ನು ಇಸ್ರಾಯೇಲ್ಯರ ಮೇಲೆ ಅರಸನಾಗಿರದ ಹಾಗೆ ತಿರ ಸ್ಕಾರ ಮಾಡಿಬಿಟ್ಟನು.
27ಸಮುವೇಲನು ಹೋಗುವದ ಕ್ಕೋಸ್ಕರ ತಿರುಗಿಕೊಳ್ಳುವಾಗ ಸೌಲನು ಅವನ ವಸ್ತ್ರದ ಕೊನೆಯನ್ನು ಹಿಡುಕೊಂಡನು. ಆಗ ಅದು ಹರಿದು ಹೋಯಿತು.
28ಆಗ ಸಮುವೇಲನು ಅವನಿಗೆನಿನ್ನ ಬಳಿಯಿಂದ ಇಸ್ರಾಯೇಲಿನ ರಾಜ್ಯವನ್ನು ಕರ್ತನು ಈ ಹೊತ್ತು ಕಿತ್ತು ನಿನಗಿಂತ ಒಳ್ಳೆಯವನಾಗಿರುವ ನಿನ್ನ ನೆರೆಯವನಿಗೆ ಅದನ್ನು ಕೊಟ್ಟನು.
29ಇಸ್ರಾ ಯೇಲಿನ ನಿತ್ಯ ಬಲವಾದಾತನು ಸುಳ್ಳು ಹೇಳುವಾತ ನಲ್ಲ, ಪಶ್ಚಾತ್ತಾಪಪಡುವಾತನೂ ಅಲ್ಲ. ಯಾಕಂದರೆ ಆತನು ಪಶ್ಚಾತ್ತಾಪಪಡುವಂತೆ ಮನುಷ್ಯನಲ್ಲ ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ