ಧರ್ಮೋಪದೇಶಕಾಂಡ 22:3

ಅವನ ಕತ್ತೆಗೆ ಹಾಗೆಯೇ ಮಾಡಬೇಕು; ಅವನ ವಸ್ತ್ರಕ್ಕೂ ಹಾಗೆಯೇ ಮಾಡ ಬೇಕು; ನಿನ್ನ ಸಹೋದರನು ಕಳೆದುಕೊಂಡ ಎಲ್ಲಾ ವಸ್ತುಗಳನ್ನು ನೀನು ಕಂಡುಕೊಂಡರೆ ಹಾಗೆಯೇ ಮಾಡಬೇಕು;

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 22

1ನಿನ್ನ ಸಹೋದರನ ಎತ್ತಾಗಲಿ ಕುರಿಯಾಗಲಿ ಮಾರ್ಗ ತಪ್ಪಿದ್ದನ್ನು ನೋಡಿ ಅವುಗಳನ್ನು ಅಲಕ್ಷ್ಯ ಮಾಡಬಾರದು; ಹೇಗಾದರೂ ಅವುಗಳನ್ನು ನಿನ್ನ ಸಹೋದರನಿಗೆ ತಿರುಗಿ ಕೊಡಬೇಕು.

2ಆದರೆ ನಿನ್ನ ಸಹೋದರನು ನಿನಗೆ ಸವಿಾಪವಾಗಿರದೆ ಹೋದರೆ ಇಲ್ಲವೆ ಅವನ ಗುರುತು ನಿನಗೆ ತಿಳಿಯದೆ ಇದ್ದರೆ ತಪ್ಪಿ ಹೋದದ್ದನ್ನು ನಿನ್ನ ಮನೆಗೆ ಒಯ್ಯಬೇಕು; ನಿನ್ನ ಸಹೋದರನು ಅದನ್ನು ಹುಡುಕುವ ವರೆಗೆ ಅದು ನಿನ್ನ ಸಂಗಡ ಇರಬೇಕು; ತರುವಾಯ ಅದನ್ನು ಹಿಂದಕ್ಕೆ ಅವನಿಗೆ ಕೊಡಬೇಕು.

3ಅವನ ಕತ್ತೆಗೆ ಹಾಗೆಯೇ ಮಾಡಬೇಕು; ಅವನ ವಸ್ತ್ರಕ್ಕೂ ಹಾಗೆಯೇ ಮಾಡ ಬೇಕು; ನಿನ್ನ ಸಹೋದರನು ಕಳೆದುಕೊಂಡ ಎಲ್ಲಾ ವಸ್ತುಗಳನ್ನು ನೀನು ಕಂಡುಕೊಂಡರೆ ಹಾಗೆಯೇ ಮಾಡಬೇಕು;

4ನೀನು ಕಾಣದವನಂತೆ ಇರಬಾರದು. ನಿನ್ನ ಸಹೋದರನ ಕತ್ತೆಯಾಗಲಿ ಎತ್ತಾಗಲಿ ಮಾರ್ಗ ದಲ್ಲಿ ಬಿದ್ದಿರುವದನ್ನು ನೋಡಿದರೆ ಅಲಕ್ಷ್ಯಮಾಡ ಬೇಡ; ಹೇಗಾದರೂ ಅವುಗಳನ್ನು ಎಬ್ಬಿಸುವದಕ್ಕೆ ಅವನಿಗೆ ಖಂಡಿತಾ ಸಹಾಯಮಾಡಬೇಕು.

5ಸ್ತ್ರೀಯು ಪುರುಷನ ಉಡಿಗೆ ಉಟ್ಟುಕೊಳ್ಳಬಾರದು; ಪುರುಷನು ಸ್ತ್ರೀ ವಸ್ತ್ರ ಹಾಕಿಕೊಳ್ಳಬಾರದು; ಇವುಗಳನ್ನು ಮಾಡುವವರೆಲ್ಲಾ ಕರ್ತನಿಗೆ ಅಸಹ್ಯ.

ಧರ್ಮೋಪದೇಶಕಾಂಡ 22 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी