೧ ಅರಸುಗಳು 19:19

ಹಾಗೆಯೇ ಅವನು ಅಲ್ಲಿಂದ ಹೊರಟು ಶಾಫಾ ಟನ ಮಗನಾದ ಎಲೀಷನನ್ನು ಕಂಡುಕೊಂಡನು; ಅವನು ತನ್ನ ಮುಂದೆ ಇರುವ ಹನ್ನೆರಡು ಜೋಡು ಎತ್ತುಗಳಿಂದ ಉಳುತ್ತಿದ್ದನು; ಅವನು ಹನ್ನೆರಡನೇ ಜೋಡಿನ ಸಂಗಡ ಇದ್ದನು. ಎಲೀಯನು ಅವನ ಪಕ್ಕದಲ್ಲಿ ಹಾದು ಹೋಗಿ ತನ್ನ ಕಂಬಳಿಯನ್ನು ಅವನ ಮೇಲೆ ಹಾಕಿದನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 19

17ಯೇಹುವಿನ ಕತ್ತಿಗೆ ತಪ್ಪಿದವನನ್ನು ಎಲೀಷನು ಕೊಂದುಹಾಕುವನು.

18ಆದರೆ ಬಾಳನಿಗೆ ಬೊಗ್ಗದೆ ಇರುವ ಸಕಲ ಮೊಣ ಕಾಲುಗಳೂ ಅದನ್ನು ಮುದ್ದಿಡದ ಸಕಲ ಬಾಯಿಗಳೂ ಆಗಿರುವ ಏಳು ಸಾವಿರ ಮಂದಿಯನ್ನು ಇಸ್ರಾಯೇ ಲಿನಲ್ಲಿ ನನಗೋಸ್ಕರ ಉಳಿಸಿಕೊಂಡಿದ್ದೇನೆ ಅಂದನು.

19ಹಾಗೆಯೇ ಅವನು ಅಲ್ಲಿಂದ ಹೊರಟು ಶಾಫಾ ಟನ ಮಗನಾದ ಎಲೀಷನನ್ನು ಕಂಡುಕೊಂಡನು; ಅವನು ತನ್ನ ಮುಂದೆ ಇರುವ ಹನ್ನೆರಡು ಜೋಡು ಎತ್ತುಗಳಿಂದ ಉಳುತ್ತಿದ್ದನು; ಅವನು ಹನ್ನೆರಡನೇ ಜೋಡಿನ ಸಂಗಡ ಇದ್ದನು. ಎಲೀಯನು ಅವನ ಪಕ್ಕದಲ್ಲಿ ಹಾದು ಹೋಗಿ ತನ್ನ ಕಂಬಳಿಯನ್ನು ಅವನ ಮೇಲೆ ಹಾಕಿದನು.

20ಆಗ ಅವನು ಎತ್ತುಗಳನ್ನು ಬಿಟ್ಟು ಎಲೀಯನ ಹಿಂದೆ ಓಡಿಹೋಗಿ ಅವನಿಗೆ --ಅಪ್ಪಣೆಯಾದರೆ ನಾನು ನನ್ನ ತಂದೆತಾಯಿಗಳನ್ನು ಮುದ್ದಿಟ್ಟು ನಿನ್ನನ್ನು ಹಿಂಬಾಲಿಸುವೆನು ಅಂದನು. ಅವನು ಇವನಿಗೆ--ಹಿಂದಕ್ಕೆ ಹೋಗು; ನಾನು ನಿನಗೆ ಏನು ಮಾಡಿದೆನು ಅಂದನು.

21ಆಗ ಇವನು ಅವನನ್ನು ಬಿಟ್ಟು ತಿರುಗಿಕೊಂಡು ಒಂದು ಜೋಡು ಎತ್ತುಗಳನ್ನು ತಕ್ಕೊಂಡು ಅವುಗಳನ್ನು ಕೊಂದು ಆ ಜೋಡು ಎತ್ತು ಕುಂಟೆಗಳಿಂದ ಅವುಗಳ ಮಾಂಸ ವನ್ನು ಬೇಯಿಸಿ ಜನರಿಗೆ ಕೊಟ್ಟನು. ಅವರು ತಿಂದ ತರುವಾಯ ಅವನು ಎದ್ದು ಎಲೀಯನ ಹಿಂದೆ ಹೋಗಿ ಅವನಿಗೆ ಸೇವೆಮಾಡಿದನು.

೧ ಅರಸುಗಳು 19 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी