ಅವರು ಅವನ ಬಳಿಗೆ ಕಳುಹಿಸಿದ ಪತ್ರದಲ್ಲಿ--
5ಆದರೆ ಈ ಕಾರ್ಯವು ದಾರ್ಯಾವೆಷನ ಬಳಿಗೆ ಬರುವ ವರೆಗೂ ಅವರು ಇವರನ್ನು ನಿಲ್ಲಿಸದ ಹಾಗೆ ಇವರ ದೇವರ ಕಣ್ಣು ಯೆಹೂದ್ಯರ ಹಿರಿಯರ ಮೇಲೆ ಇತ್ತು. ಆಗ ಇದನ್ನು ಕುರಿತು ಅವರು ಪ್ರತ್ಯುತ್ತರವನ್ನು ಪತ್ರದಲ್ಲಿ ಕಳುಹಿಸಿದರು.
6ನದಿಯ ಈಚೆಯಲ್ಲಿರುವ ಅಧಿಪತಿಯಾದ ತತ್ತೆ ನೈಯೂ ಶೆತರ್ಬೋಜೆನೈಯೂ ನದಿಯ ಈಚೆಯ ಲ್ಲಿರುವ ಅಪರ್ಸತ್ಕಾಯರಾದ ಅವನ ಜೊತೆಗಾರರೂ ಅರಸನಾದ ದಾರ್ಯಾವೆಷನಿಗೆ ಬರೆದು ಕಳುಹಿಸಿದ ಪತ್ರದ ಪ್ರತಿ.
7ಅವರು ಅವನ ಬಳಿಗೆ ಕಳುಹಿಸಿದ ಪತ್ರದಲ್ಲಿ--
8ಅರಸನಾದ ದಾರ್ಯಾವೆಷನಿಗೆ ಸಮಸ್ತ ಸಮಾ ಧಾನವು. ಅರಸನಿಗೆ ತಿಳಿಯಬೇಕಾದದ್ದೇನಂದರೆ--ನಾವು ಯೆಹೂದ್ಯರ ದೇಶದಲ್ಲಿರುವ ಮಹಾದೇವರ ಆಲಯಕ್ಕೆ ಹೋದೆವು; ಅದು ದೊಡ್ಡ ಕಲ್ಲುಗಳಿಂದ ಕಟ್ಟಲ್ಪಟ್ಟಿದೆ; ಗೋಡೆಗಳ ಮೇಲೆ ತೊಲೆಗಳು ಹೊದಿಸ ಲ್ಪಟ್ಟಿವೆ; ಆ ಕೆಲಸವು ತೀವ್ರವಾಗಿ ನಡೆಯುತ್ತಾ ಅವರ ಕೈಗಳಲ್ಲಿ ವೃದ್ಧಿಯಾಗುತ್ತದೆ.
9ಆಗ ಈ ಮನೆಯನ್ನು ಕಟ್ಟಿಸುವದಕ್ಕೂ ಈ ಗೋಡೆಗಳನ್ನು ತೀರಿಸುವದಕ್ಕೂ ನಿಮಗೆ ಅಪ್ಪಣೆಕೊಟ್ಟವರು ಯಾರೆಂದು ನಾವು ಆ ಹಿರಿಯರನ್ನು ಕೇಳಿದೆವು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ