ಯೆರೆಮಿಯ 24:4

ಆಗ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ --

ಸಂದರ್ಭದೊಂದಿಗೆ ಓದಿ · ಯೆರೆಮಿಯ 24

2ಒಂದು ಪುಟ್ಟಿಯಲ್ಲಿ ಬಹಳ ಒಳ್ಳೇ ಹಣ್ಣುಗಳು ಮೊದಲು ಮಾಗುವ ಹಣ್ಣುಗಳ ಹಾಗೆ ಇರುವವುಗಳೂ ಮತ್ತೊಂದು ಪುಟ್ಟಿಯಲ್ಲಿ ಬಹಳ ಕೆಟ್ಟ ಹಣ್ಣುಗಳು, ತಿನ್ನಕೂಡದ ಹಾಗೆ ಅಷ್ಟು ಕೆಟ್ಟವುಗಳೂ ಇದ್ದವು.

3ಆಗ ಕರ್ತನು ನನಗೆ--ಯೆರೆವಿಾಯನೇ, ಏನು ನೋಡುತ್ತೀ ಅಂದನು. ಆಗ ನಾನು ಅಂಜೂರದ ಹಣ್ಣುಗಳನ್ನು ನೋಡುತ್ತೇನೆ; ಒಳ್ಳೇ ಹಣ್ಣುಗಳು ಬಹಳ ಒಳ್ಳೇವು; ಕೆಟ್ಟ ಹಣ್ಣುಗಳು ಬಹಳ ಕೆಟ್ಟವುಗಳು, ತಿನ್ನ ಕೂಡದ ಹಾಗೆ ಅಷ್ಟು ಕೆಟ್ಟವಾಗಿವೆ ಅಂದೆನು.

4ಆಗ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ --

5ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಈ ಒಳ್ಳೇ ಅಂಜೂರದ ಹಣ್ಣುಗಳ ಹಾಗೆ ನಾನು ಈ ಸ್ಥಳದಿಂದ ಕಸ್ದೀಯರ ದೇಶಕ್ಕೆ ಒಳ್ಳೇದಕ್ಕಾಗಿ ಕಳುಹಿಸಿದ ಯೆಹೂದದ ಸೆರೆಯವರನ್ನು ಪರಾಮರಿ ಸುವೆನು.

6ನಾನು ನನ್ನ ಕಣ್ಣುಗಳನ್ನು ಅವರ ಮೇಲೆ ಒಳ್ಳೇದಕ್ಕಾಗಿ ಇಡುವೆನು. ಈ ದೇಶಕ್ಕೆ ಅವರನ್ನು ತಿರಿಗಿ ಬರಮಾಡುವೆನು; ಕೆಡವಿ ಹಾಕದೆ ಅವರನ್ನು ಕಟ್ಟುವೆನು, ಕೀಳದೆ ಅವರನ್ನು ನೆಡುವೆನು.

ಯೆರೆಮಿಯ 24 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी