ಯಾಜಕಕಾಂಡ 1:12

ಅವನು ಅದರ ತಲೆ ಮತ್ತು ಕೊಬ್ಬಿನೊಂದಿಗೆ ತುಂಡುಗಳನ್ನಾಗಿ ಮಾಡ ಬೇಕು. ಯಾಜಕನು ಅವುಗಳನ್ನು ಕ್ರಮವಾಗಿ ಯಜ್ಞ ವೇದಿಯ ಮೇಲಿನ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ಇಡಬೇಕು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 1

10ದಹನಬಲಿಗೋಸ್ಕರ ತನ್ನ ಕಾಣಿಕೆಯು ಮಂದೆ ಯಿಂದಾದರೆ ಅವನು ಕುರಿಯನ್ನಾಗಲಿ ಆಡನ್ನಾಗಲಿ ದೋಷವಿಲ್ಲದ ಒಂದು ಗಂಡನ್ನು ತರಬೇಕು.

11ಅವನು ಅದನ್ನು ಯಜ್ಞವೇದಿಯ ಉತ್ತರದ ಕಡೆಯಲ್ಲಿ ಕರ್ತನ ಮುಂದೆ ವಧಿಸಬೇಕು. ಇದಲ್ಲದೆ ಆರೋನನ ಕುಮಾರ ರಾದ ಯಾಜಕರು ಅದರ ರಕ್ತವನ್ನು ಯಜ್ಞವೇದಿಯ ಸುತ್ತಲೂ ಚಿಮುಕಿಸಬೇಕು.

12ಅವನು ಅದರ ತಲೆ ಮತ್ತು ಕೊಬ್ಬಿನೊಂದಿಗೆ ತುಂಡುಗಳನ್ನಾಗಿ ಮಾಡ ಬೇಕು. ಯಾಜಕನು ಅವುಗಳನ್ನು ಕ್ರಮವಾಗಿ ಯಜ್ಞ ವೇದಿಯ ಮೇಲಿನ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ಇಡಬೇಕು.

13ಆದರೆ ಅವನು ಕರುಳುಗಳನ್ನೂ ಕಾಲುಗಳನ್ನೂ ನೀರಿನಿಂದ ತೊಳೆಯಬೇಕು; ಆಗ ಯಾಜಕನು ಅವೆಲ್ಲವುಗಳನ್ನು ತಂದು ಯಜ್ಞವೇದಿಯ ಮೇಲೆ ಸುಡಬೇಕು. ಬೆಂಕಿಯಿಂದ ಸಮರ್ಪಿಸುವ ದಹನಬಲಿಯ ಹಾಗೆಯೂ ಕರ್ತನಿಗೆ ಸುವಾಸನೆ ಯಾಗುವಂತೆಯೂ ಸುಡಬೇಕು.

14ಅವನು ಕರ್ತನಿಗೆ ಸಮರ್ಪಿಸುವ ದಹನಬಲಿಯು ಪಕ್ಷಿಗಳಾಗಿದ್ದರೆ ಅವನು ತನ್ನ ಯಜ್ಞಕ್ಕಾಗಿ ಬೆಳವಕ್ಕಿಯ ನ್ನಾಗಲಿ ಪಾರಿವಾಳದ ಮರಿಯನ್ನಾಗಲಿ ತರಬೇಕು.

ಯಾಜಕಕಾಂಡ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी