ಯೆಹೋಶುವ 23:7

ನಿಮ್ಮ ಮಧ್ಯದಲ್ಲಿ ಉಳಿದಿರುವ ಈ ಜನಾಂಗಗಳಲ್ಲಿ ಸೇರದೆ ಅವರ ದೇವರುಗಳ ಹೆಸರುಗಳನ್ನು ಸ್ಮರಿಸದೆ ಅವುಗಳ ಮೇಲೆ ಆಣೆ ಇಡದೆ ನೀವು ಅವುಗಳಿಗೆ ಸೇವೆಮಾಡದೆ ಅಡ್ಡಬೀಳದೆ ಇರುವ ಹಾಗೆ ಬಲ ಗೊಂಡು

ಸಂದರ್ಭದೊಂದಿಗೆ ಓದಿ · ಯೆಹೋಶುವ 23

5ಇದಲ್ಲದೆ ನಿಮ್ಮ ದೇವ ರಾದ ಕರ್ತನು ಅವರನ್ನು ನಿಮ್ಮ ಮುಂದೆ ತಳ್ಳಿಬಿಟ್ಟು ನಿಮ್ಮ ಕಣ್ಣೆದುರಿನಿಂದ ಅವರನ್ನು ಹೊರಡಿಸಿಬಿಡುವನು. ಕರ್ತನು ನಿಮಗೆ ವಾಗ್ದಾನಮಾಡಿದ ಹಾಗೆಯೇ ನೀವು ಅವರ ದೇಶವನ್ನು ಸ್ವಾಧೀನಮಾಡಿಕೊಳ್ಳುವಿರಿ.

6ಈಗ ನೀವು ಮೋಶೆಯ ನ್ಯಾಯಪ್ರಮಾಣದ ಪುಸ್ತಕದಲ್ಲಿ ಬರೆದಿರುವ ಎಲ್ಲವನ್ನು ಕೈಕೊಂಡು ಬಹು ಧೈರ್ಯದಿಂದ ಮಾಡುವ ಹಾಗೆ ಅದನ್ನು ಬಿಟ್ಟು ಬಲಗಡೆಗಾದರೂ ಎಡಗಡೆಗಾದರೂ ತಿರುಗದೆ

7ನಿಮ್ಮ ಮಧ್ಯದಲ್ಲಿ ಉಳಿದಿರುವ ಈ ಜನಾಂಗಗಳಲ್ಲಿ ಸೇರದೆ ಅವರ ದೇವರುಗಳ ಹೆಸರುಗಳನ್ನು ಸ್ಮರಿಸದೆ ಅವುಗಳ ಮೇಲೆ ಆಣೆ ಇಡದೆ ನೀವು ಅವುಗಳಿಗೆ ಸೇವೆಮಾಡದೆ ಅಡ್ಡಬೀಳದೆ ಇರುವ ಹಾಗೆ ಬಲ ಗೊಂಡು

8ಈ ದಿನದ ವರೆಗೂ ಮಾಡಿದ ಹಾಗೆಯೇ ನಿಮ್ಮ ದೇವರಾದ ಕರ್ತನನ್ನು ಅಂಟಿಕೊಂಡಿರ್ರಿ.

9ಕರ್ತನು ನಿಮ್ಮ ಮುಂದೆ ಬಲವಾದ ದೊಡ್ಡ ಜನಾಂಗಗಳನ್ನು ಹೊರಡಿಸಿಬಿಟ್ಟನು. ಆದರೆ ನಿಮ್ಮ ಮುಂದೆ ಈ ವರೆಗೂ ಒಬ್ಬರಾದರೂ ನಿಲ್ಲಲಾರದೆ ಹೋದರು.

ಯೆಹೋಶುವ 23 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी