ಯೆಹೋಶುವ 18:4

ಒಂದೊಂದು ಗೋತ್ರಕ್ಕೆ ಮೂರು ಮಂದಿಯ ಪ್ರಕಾರ ನಿಮ್ಮೊಳಗಿಂದ ಕರೆದುಕೊಂಡು ಬನ್ನಿರಿ; ನಾನು ಅವರನ್ನು ಕಳುಹಿಸುವೆನು. ಅವರು ದೇಶದಲ್ಲೆಲ್ಲಾ ಹೋಗಿ ತಮ್ಮ ಬಾಧ್ಯೆತೆಗಳ ಪ್ರಕಾರ ಅದನ್ನು ವಿವರಿಸುವರು, ತರುವಾಯ ನನ್ನ ಬಳಿಗೆ ಅವರು ತಿರುಗಿ ಬರಬೇಕು.

ಸಂದರ್ಭದೊಂದಿಗೆ ಓದಿ · ಯೆಹೋಶುವ 18

2ಆದರೆ ಇಸ್ರಾಯೇಲ್‌ ಮಕ್ಕಳಲ್ಲಿ ತಮ್ಮ ಬಾಧ್ಯತೆ ಯನ್ನು ಇನ್ನೂ ಹೊಂದಿಕೊಳ್ಳದ ಏಳು ಗೋತ್ರಗಳು ಉಳಿದಿದ್ದವು.

3ಯೆಹೋಶುವನು ಇಸ್ರಾಯೇಲ್‌ ಮಕ್ಕಳಿಗೆ--ನಿಮ್ಮ ತಂದೆಗಳ ದೇವರಾದ ಕರ್ತನು ನಿಮಗೆ ಕೊಟ್ಟ ದೇಶವನ್ನು ಸ್ವಾಧೀನಮಾಡಿಕೊಳ್ಳು ವದಕ್ಕೆ ನೀವು ಎಷ್ಟರ ವರೆಗೆ ಆಲಸ್ಯಮಾಡುವಿರಿ?

4ಒಂದೊಂದು ಗೋತ್ರಕ್ಕೆ ಮೂರು ಮಂದಿಯ ಪ್ರಕಾರ ನಿಮ್ಮೊಳಗಿಂದ ಕರೆದುಕೊಂಡು ಬನ್ನಿರಿ; ನಾನು ಅವರನ್ನು ಕಳುಹಿಸುವೆನು. ಅವರು ದೇಶದಲ್ಲೆಲ್ಲಾ ಹೋಗಿ ತಮ್ಮ ಬಾಧ್ಯೆತೆಗಳ ಪ್ರಕಾರ ಅದನ್ನು ವಿವರಿಸುವರು, ತರುವಾಯ ನನ್ನ ಬಳಿಗೆ ಅವರು ತಿರುಗಿ ಬರಬೇಕು.

5ಅದನ್ನು ಅವರು ಏಳು ಪಾಲಾಗಿ ಹಂಚಬೇಕು. ದಕ್ಷಿಣದಲ್ಲಿ ಯೂದಗೋತ್ರದವರೂ ಉತ್ತರದಲ್ಲಿ ಯೋಸೇಫನ ಮನೆತನದವರೂ ನೆಲಸಬೇಕು.

6ನೀವು ದೇಶವನ್ನು ಏಳು ಪಾಲಾಗಿ ವಿವರಿಸಬೇಕು ಮತ್ತು ಅದರ ವಿವರಗಳನ್ನು ನನ್ನ ಬಳಿಯಲ್ಲಿ ತರಬೇಕು. ಆಗ ನಾನು ಈ ಸ್ಥಳದಲ್ಲಿ ನಮ್ಮ ದೇವರಾದ ಕರ್ತನ ಮುಂದೆ ನಿಮಗೊಸ್ಕರ ಚೀಟುಗಳನ್ನು ಹಾಕುವೆನು.

ಯೆಹೋಶುವ 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी