ಹೀಗೆ ನನ್ನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿಸಿಕೊಂಡಿರೆಂದು ಯಾರಿಗೂ ಹೇಳುವದ ಕ್ಕಾಗದು.
13ಕ್ರಿಸ್ತನು ವಿಭಾಗವಾಗಿದ್ದಾನೋ? ನಿಮಗೋಸ್ಕರ ಶಿಲುಬೆಗೆ ಹಾಕಿಸಿಕೊಂಡವನು ಪೌಲನೋ? ನೀವು ಪೌಲನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿಸಿಕೊಂಡಿರೋ?
14ನಿಮ್ಮಲ್ಲಿ ಕ್ರಿಸ್ಪನಿಗೂ ಗಾಯನಿಗೂ ಹೊರತಾಗಿ ಮತ್ತಾರಿಗೂ ನಾನು ಬಾಪ್ತಿಸ್ಮ ಮಾಡಿಸಲಿಲ್ಲವಾದದರಿಂದ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ.
15ಹೀಗೆ ನನ್ನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿಸಿಕೊಂಡಿರೆಂದು ಯಾರಿಗೂ ಹೇಳುವದ ಕ್ಕಾಗದು.
16ನಾನು ಸ್ತೆಫನನ ಮನೆಯವರಿಗೆ ಸಹ ಬಾಪ್ತಿಸ್ಮ ಮಾಡಿಸಿದೆನು. ಇವರಿಗಲ್ಲದೆ ಇನ್ನಾರಿಗೂ ನಾನು ಬಾಪ್ತಿಸ್ಮ ಮಾಡಿಸಿದಂತೆ ಕಾಣೆನು.
17ಬಾಪ್ತಿಸ್ಮ ಮಾಡಿಸುವದಕ್ಕಲ್ಲ, ಸುವಾರ್ತೆಯನ್ನು ಸಾರುವದಕ್ಕೆ ಕ್ರಿಸ್ತನು ನನ್ನನ್ನು ಕಳುಹಿಸಿದನು. ವಾಕ್ಚಾತುರ್ಯದಿಂದ ಸಾರಬೇಕೆಂದು ಕಳುಹಿಸಲಿಲ್ಲ; ಹಾಗೆ ಸಾರಿದರೆ ಕ್ರಿಸ್ತನ ಶಿಲುಬೆಯು ನಿರರ್ಥಕವಾಗುವದು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ