ಯೆಹೆಜ್ಕೇಲನು 16:9

ಆಮೇಲೆ ನಿನ್ನನ್ನು ನೀರಿನಿಂದ ತೊಳೆದೆನು; ಹೌದು, ನಿನ್ನ ರಕ್ತವನ್ನು ಶುದ್ಧವಾಗಿ ನಿನ್ನಿಂದ ತೊಳೆದೆನು; ನಿನಗೆ ಎಣ್ಣೆಯಿಂದ ಅಭಿಷೇಕ ಮಾಡಿದೆನು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 16

7ಭೂಮಿಯಲ್ಲಿಯ ಮೊಳಿಕೆಯೋ ಎಂಬಂತೆ ನಾನು ನಿನ್ನನ್ನು ಬೆಳೆಸಲು (ಹೆಚ್ಚಿಸಲು) ನೀನು ಬಲಿತು ಪ್ರಾಯವು ತುಂಬಿ ಅತಿ ಸೌಂದರ್ಯವಂತೆಯಾದೆ; ನಿನ್ನ ಸ್ತನಗಳು ರೂಪಗೊಂಡವು; ನಿನ್ನ ಕೂದಲು ಬೆಳೆಯಿತು; ಆದರೆ ಮೊದಲು ನೀನು ಬರೀ ಬೆತ್ತಲೆ ಯಾಗಿದ್ದೆ.

8ಈಗ ನಾನು ನಿನ್ನ ಬಳಿ ಹಾದು ಹೋಗು ವಾಗ ನಿನ್ನನ್ನು ನೋಡಲು ಇಗೋ, ನಿನ್ನ ಕಾಲವು ಪ್ರೇಮಿಸುವ ಕಾಲವಾಗಿತ್ತು; ಆಗ ನಾನು ನನ್ನ ಸೆರಗನ್ನು ನಿನ್ನ ಮೇಲೆ ಹೊದಿಸಿ, ನಿನ್ನ ಬೆತ್ತಲೆಯನ್ನು ಮುಚ್ಚಿದೆನು. ಹೌದು, ನಾನು ನಿನಗೆ ಆಣೆಯಿಟ್ಟು ಒಡಂಬಡಿಕೆ ಮಾಡಿಕೊಂಡದ್ದರಿಂದ ನೀನು ನನ್ನವಳಾದೆ ಎಂದು ದೇವರಾದ ಕರ್ತನು ಹೇಳುತ್ತಾನೆ.

9ಆಮೇಲೆ ನಿನ್ನನ್ನು ನೀರಿನಿಂದ ತೊಳೆದೆನು; ಹೌದು, ನಿನ್ನ ರಕ್ತವನ್ನು ಶುದ್ಧವಾಗಿ ನಿನ್ನಿಂದ ತೊಳೆದೆನು; ನಿನಗೆ ಎಣ್ಣೆಯಿಂದ ಅಭಿಷೇಕ ಮಾಡಿದೆನು.

10ಇದಲ್ಲದೆ ನಾನು ಕಸೂ ತಿಯ ಬಟ್ಟೆಯನ್ನು ನಿನಗೆ ತೊಡಿಸಿ, ಕಡಲ ಪ್ರಾಣಿಯ ಜೋಡುಗಳನ್ನು ಕೊಟ್ಟೆನು, ನಯವಾದ ನಾರುಮಡಿ ಯನ್ನು ನಿನಗೆ ಉಡಿಸಿದೆನು, ರೇಷ್ಮೆಯ ಹೊದಿಕೆಯನ್ನು ನಿನಗೆ ಹೊದಿಸಿದೆನು.

11ನಾನು ಆಭರಣಗಳಿಂದಲೂ ನಿನ್ನನ್ನು ಅಲಂಕರಿಸಿದೆನು; ನಾನು ನಿನ್ನ ಕೈಗಳಿಗೆ ಕಡಗ ಗಳನ್ನು, ನಿನ್ನ ಕೊರಳಿಗೆ ಸರವನ್ನು ಹಾಕಿದೆನು.

ಯೆಹೆಜ್ಕೇಲನು 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी