ಆಗ ಅವಳು--ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದವನಿಗೆ ನೀವು ಹೇಳಬೇಕಾದದ್ದೇನಂದರೆ
21ನೀವು ಹೋಗಿ ನನಗೋಸ್ಕ ರವೂ ಇಸ್ರಾಯೇಲಿನಲ್ಲಿಯೂ ಯೆಹೂದದಲ್ಲಿಯೂ ಉಳಿದವರಿಗೋಸ್ಕರವೂ ಸಿಕ್ಕಿದ ಪುಸ್ತಕದ ಮಾತು ಗಳನ್ನು ಕುರಿತು ಕರ್ತನನ್ನು ವಿಚಾರಿಸಿರಿ. ಯಾಕಂದರೆ ನಮ್ಮ ಪಿತೃಗಳು ಈ ಪುಸ್ತಕದಲ್ಲಿ ಬರೆದ ಎಲ್ಲಾದರ ಪ್ರಕಾರ ಮಾಡಲು ಕರ್ತನ ವಾಕ್ಯವನ್ನು ಕೈಕೊಳ್ಳದೆ ಇದ್ದದರಿಂದ ನಮ್ಮ ಮೇಲೆ ಸುರಿದ ಕರ್ತನ ಕೋಪವು ದೊಡ್ಡದಾಗಿದೆ ಎಂದು ಹೇಳಿದನು.
22ಆಗ ಹಿಲ್ಕೀ ಯನೂ ಅರಸನಿಂದ ನೇಮಿಸಲ್ಪಟ್ಟವರೂ ಹಸ್ರನ ಮಗನೂ ತೊಕ್ಹತನ ಮಗನೂ ವಸ್ತ್ರಗಳ ಕಾವಲುಗಾ ರನೂ ಆದ ಶಲ್ಲೂಮನ ಹೆಂಡತಿಯಾಗಿರುವ ಪ್ರವಾದಿ ನಿಯಾದ ಹುಲ್ದಳ ಬಳಿಗೆ ಹೋಗಿ ಅವಳ ಸಂಗಡ ಅದನ್ನು ಕುರಿತು ಮಾತನಾಡಿದರು. (ಅವಳು ಯೆರೂ ಸಲೇಮಿನೊಳಗೆ ಮಹಾವಿದ್ಯಾಲಯದಲ್ಲಿ ವಾಸವಾಗಿ ದ್ದಳು.)
23ಆಗ ಅವಳು--ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದವನಿಗೆ ನೀವು ಹೇಳಬೇಕಾದದ್ದೇನಂದರೆ
24ಇಗೋ, ನಾನು ಈ ಸ್ಥಳದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಕೇಡನ್ನೂ ಯೆಹೂದದ ಅರಸನ ಮುಂದೆ ಅವರು ಓದಿದ ಪುಸ್ತಕದಲ್ಲಿ ಬರೆ ಯಲ್ಪಟ್ಟ ಎಲ್ಲಾ ಶಾಪಗಳನ್ನೂ ಬರಮಾಡುವೆನು.
25ಯಾಕಂದರೆ ತಮ್ಮ ಸಮಸ್ತ ಕೈ ಕ್ರಿಯೆಗಳಿಂದ ನನಗೆ ಕೋಪವನ್ನೆಬ್ಬಿಸುವ ಹಾಗೆ ಅವರು ನನ್ನನ್ನು ಬಿಟ್ಟು ಇತರ ದೇವರುಗಳಿಗೆ ಧೂಪವನ್ನು ಸುಟ್ಟಿದ್ದಾರೆ. ಆದದರಿಂದ ನನ್ನ ಕೋಪವು ಈ ಸ್ಥಳದ ಮೇಲೆ ಸುರಿಸಲ್ಪಡುವದು; ಅದು ಆರಿಹೋಗುವದಿಲ್ಲ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ