ಕೊಲೊಸ್ಸೆಯವರಿಗೆ 3:11

ಇದರಲ್ಲಿ ಗ್ರೀಕನು ಯೆಹೂದ್ಯನು ಎಂಬ ಭೇದವಿಲ್ಲ; ಸುನ್ನತಿ ಮಾಡಿಸಿ ಕೊಂಡವರು ಸುನ್ನತಿ ಮಾಡಿಸಿಕೊಳ್ಳದವರು ಎಂಬ ಭೇದವಿಲ್ಲ, ಮ್ಲೇಚ್ಛ ಹೂನರೆಂದಿಲ್ಲ; ದಾಸನು ಸ್ವತಂತ್ರನು ಎಂಬ ಭೇದವಿಲ್ಲ; ಆದರೆ ಕ್ರಿಸ್ತನೇ ಸಮಸ್ತರಲ್ಲಿಯೂ ಸಮಸ್ತವೂ ಆಗಿದ್ದಾನೆ.

ಸಂದರ್ಭದೊಂದಿಗೆ ಓದಿ · ಕೊಲೊಸ್ಸೆಯವರಿಗೆ 3

9ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ; ನೀವು ಹಳೇ ಮನುಷ್ಯನನ್ನು ಅವನ ಕೃತ್ಯಗಳ ಕೂಡ ತೆಗೆದುಹಾಕಿದ್ದೀರಲ್ಲವೇ?

10ನೀವು ನೂತನ ಮನುಷ್ಯನನ್ನು ಧರಿಸಿಕೊಂಡವರಾಗಿದ್ದೀರಿ ಅವನನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ಜ್ಞಾನದಲ್ಲಿ ಅವನು ನೂತನವಾಗುತ್ತಾನೆ.

11ಇದರಲ್ಲಿ ಗ್ರೀಕನು ಯೆಹೂದ್ಯನು ಎಂಬ ಭೇದವಿಲ್ಲ; ಸುನ್ನತಿ ಮಾಡಿಸಿ ಕೊಂಡವರು ಸುನ್ನತಿ ಮಾಡಿಸಿಕೊಳ್ಳದವರು ಎಂಬ ಭೇದವಿಲ್ಲ, ಮ್ಲೇಚ್ಛ ಹೂನರೆಂದಿಲ್ಲ; ದಾಸನು ಸ್ವತಂತ್ರನು ಎಂಬ ಭೇದವಿಲ್ಲ; ಆದರೆ ಕ್ರಿಸ್ತನೇ ಸಮಸ್ತರಲ್ಲಿಯೂ ಸಮಸ್ತವೂ ಆಗಿದ್ದಾನೆ.

12ಆದದರಿಂದ ನೀವು ದೇವರಿಂದ ಆರಿಸಿಕೊಂಡ ವರೂ ಪರಿಶುದ್ಧರೂ ಪ್ರಿಯರೂ ಆಗಿರುವವರಿಗೆ ತಕ್ಕಂತೆ ಕನಿಕರ ದಯೆ ದೀನಮನಸ್ಸು ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.

13ಯಾವನಿ ಗಾದರೂ ಒಬ್ಬನಿಗೆ ಇನ್ನೊಬ್ಬನ ಮೇಲೆ ವಿರೋಧವಾಗಿ ವ್ಯಾಜ್ಯವಿದ್ದರೂ ಒಬ್ಬರಿಗೊಬ್ಬರು ತಾಳಿಕೊಂಡು ಕ್ರಿಸ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವು ಒಬ್ಬರಿಗೊಬ್ಬರು ಕ್ಷಮಿಸಿರಿ.

ಕೊಲೊಸ್ಸೆಯವರಿಗೆ 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी