೨ ಪೂರ್ವಕಾಲವೃತ್ತಾಂತ 1:3

ಹೀಗೆ ಅವನು ಅವನ ಸಂಗಡ ಸಮಸ್ತ ಸಭೆಯವರು ಗಿಬ್ಯೋನಿನಲ್ಲಿರುವ ಉನ್ನತ ಸ್ಥಳಕ್ಕೆ ಹೋದರು. ಕರ್ತನ ಸೇವಕನಾದ ಮೋಶೆಯು ಅರಣ್ಯ ದಲ್ಲಿ ಮಾಡಿದ ದೇವರ ಸಭೆಯ ಗುಡಾರವು ಅಲ್ಲಿತ್ತು.

ಸಂದರ್ಭದೊಂದಿಗೆ ಓದಿ · ೨ ಪೂರ್ವಕಾಲವೃತ್ತಾಂತ 1

1ದಾವೀದನ ಮಗನಾದ ಸೊಲೊಮೋ ನನು ತನ್ನ ರಾಜ್ಯದಲ್ಲಿ ಬಲಗೊಂಡನು. ಅವನ ದೇವರಾದ ಕರ್ತನು ಅವನ ಸಂಗಡ ಇದ್ದು ಅವನನ್ನು ಅಧಿಕವಾಗಿ ಹೆಚ್ಚಿಸಿದನು.

2ಸೊಲೊಮೋ ನನು ಸಮಸ್ತ ಇಸ್ರಾಯೇಲ್ಯರೊಡನೆಯೂ ಸಹಸ್ರ ಶತಾಧಿಪತಿಗಳೊಡನೆಯೂ ನ್ಯಾಯಾಧಿಪತಿಗಳೊ ಡನೆಯೂ ಪ್ರಧಾನ ಪಿತೃಗಳೊಡನೆಯೂ ಇಸ್ರಾಯೇಲಿನಲ್ಲಿರುವ ಸಮಸ್ತ ಪ್ರಭುಗಳೊಡನೆಯೂ ಮಾತ ನಾಡಿದನು.

3ಹೀಗೆ ಅವನು ಅವನ ಸಂಗಡ ಸಮಸ್ತ ಸಭೆಯವರು ಗಿಬ್ಯೋನಿನಲ್ಲಿರುವ ಉನ್ನತ ಸ್ಥಳಕ್ಕೆ ಹೋದರು. ಕರ್ತನ ಸೇವಕನಾದ ಮೋಶೆಯು ಅರಣ್ಯ ದಲ್ಲಿ ಮಾಡಿದ ದೇವರ ಸಭೆಯ ಗುಡಾರವು ಅಲ್ಲಿತ್ತು.

4ದಾವೀದನು ಕರ್ತನ ಮಂಜೂಷವನ್ನು ಕಿರ್ಯತ್ಯಾ ರೀಮಿನಿಂದ ತಾನು ಅದಕ್ಕೊಸ್ಕರ ಸಿದ್ಧಮಾಡಿದ ಸ್ಥಳಕ್ಕೆ ತೆಗೆದುಕೊಂಡು ಬಂದಿದ್ದನು. ಯಾಕಂದರೆ ಅವನು ಯೆರೂಸಲೇಮಿನಲ್ಲಿ ಅದಕ್ಕೋಸ್ಕರ ಡೇರೆಯನ್ನು ಹಾಕಿ ಸಿದ್ದನು.

5ಇದಲ್ಲದೆ ಹೂರನ ಮಗನಾದ ಊರೀ ಯನ ಮಗನಾದ ಬೆಚಲೇಲನು ಮಾಡಿದ ತಾಮ್ರದ ಬಲಿಪೀಠವನ್ನು ಕರ್ತನ ಗುಡಾರದ ಮುಂದೆ ಇಟ್ಟನು. ಸೊಲೊಮೋನನೂ ಸಭೆಯೂ ಅದರ ಮುಂದೆ ವಿಚಾರಿಸುತ್ತಿದ್ದರು.

೨ ಪೂರ್ವಕಾಲವೃತ್ತಾಂತ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी