ಆದಿಕಾಂಡ 45:16

ಯೋಸೇಫನ ಸಹೋದರರು ಬಂದಿದ್ದಾರೆಂಬ ಸುದ್ದಿಯನ್ನು ಫರೋಹನ ಮನೆಯವರು ಕೇಳಿದಾಗ ಫರೋಹನಿಗೂ ಅವನ ಸೇವಕರಿಗೂ ಅದು ಮೆಚ್ಚಿಕೆಯಾಗಿತ್ತು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 45

14ಅವನು ತನ್ನ ತಮ್ಮನಾದ ಬೆನ್ಯಾವಿಾನನ ಕೊರಳನ್ನು ಅಪ್ಪಿ ಕೊಂಡು ಅತ್ತನು; ಬೆನ್ಯಾವಿಾನನೂ ಅವನ ಕೊರಳನ್ನು ಅಪ್ಪಿಕೊಂಡು ಅತ್ತನು.

15ಇದಲ್ಲದೆ ತನ್ನ ಸಹೋದರ ರಿಗೆಲ್ಲಾ ಮುದ್ದಿಟ್ಟು ಅವರನ್ನು ಹಿಡುಕೊಂಡು ಅತ್ತನು. ತರುವಾಯ ಅವನ ಸಹೋದರರು ಅವನ ಸಂಗಡ ಮಾತನಾಡಿದರು.

16ಯೋಸೇಫನ ಸಹೋದರರು ಬಂದಿದ್ದಾರೆಂಬ ಸುದ್ದಿಯನ್ನು ಫರೋಹನ ಮನೆಯವರು ಕೇಳಿದಾಗ ಫರೋಹನಿಗೂ ಅವನ ಸೇವಕರಿಗೂ ಅದು ಮೆಚ್ಚಿಕೆಯಾಗಿತ್ತು.

17ಫರೋಹನು ಯೋಸೇಫ ನಿಗೆ--ನಿನ್ನ ಸಹೋದರರಿಗೆ--ನೀವು ಹೀಗೆ ಮಾಡಿರಿ; ನಿಮ್ಮ ಪಶುಗಳ ಮೇಲೆ ಸಾಮಾಗ್ರಿಗಳನ್ನು ಹೇರಿ ಕಾನಾನ್‌ ದೇಶಕ್ಕೆ ಹೋಗಿ

18ನಿಮ್ಮ ತಂದೆಯನ್ನೂ ನಿಮ್ಮ ನಿಮ್ಮ ಮನೆಯವರನ್ನೂ ಕರಕೊಂಡು ನನ್ನ ಬಳಿಗೆ ಬನ್ನಿರಿ. ಐಗುಪ್ತದೇಶದ ಉತ್ತಮವಾದದ್ದನ್ನು ನಾನು ನಿಮಗೆ ಕೊಡುವೆನು. ಈ ದೇಶದ ಸಾರವನ್ನು ಊಟಮಾಡುವಿರಿ.

ಆದಿಕಾಂಡ 45 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी