೨ ಅರಸುಗಳು 11:9

ಹಾಗೆಯೇ ನೂರಕ್ಕೆ ಅಧಿಪತಿಯಾದವರು ಯಾಜಕನಾದ ಯೆಹೋಯಾದಾ ವನು ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಮಾಡಿ ಪ್ರತಿ ಮನುಷ್ಯನು ಸಬ್ಬತ್‌ ದಿವಸದಲ್ಲಿ ಪ್ರವೇಶಿಸಬೇಕಾದ ತನ್ನ ಜನರನ್ನೂ ಸಬ್ಬತ್‌ ದಿವಸದಲ್ಲಿ ಹೊರಗೆ ಹೋಗಲು ಬೇಕಾದವರನ್ನೂ ಯಾಜಕನಾದ ಯೆಹೋ ಯಾದಾವನ ಬಳಿಗೆ ಕರಕೊಂಡು ಬಂದರು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 11

7ಇದಲ್ಲದೆ ಸಬ್ಬತ್‌ ದಿವಸದಲ್ಲಿ ಹೊರಡುವ ನಿಮ್ಮೆಲ್ಲರಲ್ಲಿ ಎರಡು ಭಾಗ ಅರಸನ ಬಳಿಯಲ್ಲಿ ಕರ್ತನ ಮನೆಯ ಕಾವಲು ಕಾಯುವವರಾಗಿರ್ರಿ.

8ನಿಮ್ಮಲ್ಲಿ ಪ್ರತಿ ಮನುಷ್ಯನು ತನ್ನ ಕೈಯಲ್ಲಿ ಆಯುಧಗಳನ್ನು ಹಿಡುಕೊಂಡು ಅರಸ ನನ್ನು ಸುತ್ತಿಕೊಂಡಿರ್ರಿ; ಯಾವನಾದರೂ ಸಾಲುಗಳಲ್ಲಿ ಬಂದರೆ ಅವನು ಕೊಲೆಯಾಗಲಿ. ಆದರೆ ಅರಸನು ಹೊರಗೆ ಹೋಗುವಾಗಲೂ ಒಳಗೆ ಬರುವಾಗಲೂ ನೀವು ಅವನ ಸಂಗಡ ಇರ್ರಿ.

9ಹಾಗೆಯೇ ನೂರಕ್ಕೆ ಅಧಿಪತಿಯಾದವರು ಯಾಜಕನಾದ ಯೆಹೋಯಾದಾ ವನು ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಮಾಡಿ ಪ್ರತಿ ಮನುಷ್ಯನು ಸಬ್ಬತ್‌ ದಿವಸದಲ್ಲಿ ಪ್ರವೇಶಿಸಬೇಕಾದ ತನ್ನ ಜನರನ್ನೂ ಸಬ್ಬತ್‌ ದಿವಸದಲ್ಲಿ ಹೊರಗೆ ಹೋಗಲು ಬೇಕಾದವರನ್ನೂ ಯಾಜಕನಾದ ಯೆಹೋ ಯಾದಾವನ ಬಳಿಗೆ ಕರಕೊಂಡು ಬಂದರು.

10ಆಗ ಯಾಜಕನು ಕರ್ತನ ಆಲಯದಲ್ಲಿದ್ದ ಅರಸನಾದ ದಾವೀದನ ಈಟಿಗಳನ್ನೂ ಗುರಾಣಿಗಳನ್ನೂ ನೂರಕ್ಕೆ ಅಧಿಪತಿಯಾದವರಿಗೆ ಕೊಟ್ಟನು.

11ಕಾವಲುಗಾರರಲ್ಲಿ ಪ್ರತಿ ಮನುಷ್ಯನು ತನ್ನ ಆಯುಧಗಳನ್ನು ಕೈಯಲ್ಲಿ ಹಿಡುಕೊಂಡು ಬಲಿಪೀಠದ ಬಳಿಯಲ್ಲಿಯೂ ಆಲಯದ ಬಳಿಯಲ್ಲಿಯೂ ಆಲಯದ ಬಲಪಾರ್ಶ್ವ ಮೊದಲು ಗೊಂಡು ಎಡಪಾರ್ಶ್ವದ ವರೆಗೂ ಅರಸನ ಸುತ್ತಲೂ ನಿಂತುಕೊಂಡರು.

೨ ಅರಸುಗಳು 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी