ಯಾಜಕಕಾಂಡ 24:11

ಇಸ್ರಾಯೇಲ್‌ ಸ್ತ್ರೀಯ ಮಗನು ಕರ್ತನ ನಾಮವನ್ನು ದೂಷಿಸಿ ಶಪಿಸಿ ದನು. ಅವರು ಅವನನ್ನು ಮೋಶೆಯ ಬಳಿಗೆ ತಂದರು; (ಅವನ ತಾಯಿಯ ಹೆಸರು ದಾನನ ಕುಲದವನಾದ ದಿಬ್ರೀಯ ಮಗಳಾದ ಶೆಲೋವಿಾತ್‌).

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 24

9ಅದು ಆರೋನನ ಮತ್ತು ಅವನ ಕುಮಾರರದ್ದಾಗಿರಬೇಕು; ಅವರು ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು; ಅದು ನಿತ್ಯವಾದ ನಿಯಮವಾಗಿ ಕರ್ತನಿಗೆ ಬೆಂಕಿಯಿಂದ ಮಾಡಿ ಸಮರ್ಪಿಸುವವುಗಳಲ್ಲಿ ಅವನಿಗೆ ಅತಿ ಪರಿಶುದ್ಧವಾಗಿರುವದು.

10ಇದಲ್ಲದೆ ಇಸ್ರಾಯೇಲಿನವಳಾದ ಒಬ್ಬ ಸ್ತ್ರೀಗೂ ಐಗುಪ್ತನಾದ ಪುರುಷನಿಗೂ ಹುಟ್ಟಿದ ಮಗನು ಇಸ್ರಾಯೇಲ್‌ ಮಕ್ಕಳ ಮಧ್ಯದೊಳಗಿಂದ ಹೊರಗೆ ಬಂದನು; ಇಸ್ರಾಯೇಲಿನವಳಾದ ಸ್ತ್ರೀಯ ಈ ಮಗನು ಇಸ್ರಾಯೇಲಿನ ಒಬ್ಬ ಮನುಷ್ಯನೊಂದಿಗೆ ಪಾಳೆಯದಲ್ಲಿ ಒಬ್ಬರಿಗೊಬ್ಬರು ಜಗಳವಾಡಿದರು.

11ಇಸ್ರಾಯೇಲ್‌ ಸ್ತ್ರೀಯ ಮಗನು ಕರ್ತನ ನಾಮವನ್ನು ದೂಷಿಸಿ ಶಪಿಸಿ ದನು. ಅವರು ಅವನನ್ನು ಮೋಶೆಯ ಬಳಿಗೆ ತಂದರು; (ಅವನ ತಾಯಿಯ ಹೆಸರು ದಾನನ ಕುಲದವನಾದ ದಿಬ್ರೀಯ ಮಗಳಾದ ಶೆಲೋವಿಾತ್‌).

12ಅವನ ವಿಷಯವಾಗಿ ಅವರು ಕರ್ತನ ತೀರ್ಪನ್ನು ತಿಳಿದು ಕೊಳ್ಳುವದಕೋಸ್ಕರ ಅವನನ್ನು ಕಾವಲಲ್ಲಿ ಇಟ್ಟರು.

13ಆಗ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ--

ಯಾಜಕಕಾಂಡ 24 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी