೧ ಸಮುವೇಲನು 6:13

ಬೇತ್ಷೆಮೆಷಿನ ಮನುಷ್ಯರು ತಗ್ಗಿನಲ್ಲಿ ಗೋಧಿಯ ಪೈರನ್ನು ಕೊಯ್ಯುತ್ತಿದ್ದರು. ಅವರು ತಮ್ಮ ಕಣ್ಣುಗಳನ್ನು ಎತ್ತಿ ಮಂಜೂಷವನ್ನು ಕಂಡು ಅದನ್ನು ನೋಡಿದ್ದಕ್ಕೆ ಸಂತೋಷಪಟ್ಟರು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 6

11ಕರ್ತನ ಮಂಜೂಷವನ್ನೂ ಬಂಗಾರದ ಇಲಿಗಳನ್ನೂ ತಮ್ಮ ಗಡ್ಡೆವ್ಯಾಧಿಯ ರೂಪಗಳನ್ನೂ ಹಿಡಿಯುವ ಚಿಕ್ಕ ಪೆಟ್ಟಿಗೆ ಯನ್ನೂ ಆ ಬಂಡಿಯ ಮೇಲಿಟ್ಟರು.

12ಆಗ ಹಸುಗಳು ಕೂಗುತ್ತಾ ಬೇತ್ಷೆಮೆಷಿಗೆ ಹೋಗುವ ಮಾರ್ಗವನ್ನು ಹಿಡಿದು ಬಲಕ್ಕೆ ಎಡಕ್ಕೆ ತಿರುಗದೆ ಹೆದ್ದಾರಿಯಲ್ಲಿ ಹೋದವು; ಫಿಲಿಷ್ಟಿಯರ ಅಧಿಪತಿಗಳು ಬೇತ್ಷೆಮೆಷಿನ ಮೇರೆಯವರೆಗೂ ಅವುಗಳ ಹಿಂದೆ ಹೋದರು.

13ಬೇತ್ಷೆಮೆಷಿನ ಮನುಷ್ಯರು ತಗ್ಗಿನಲ್ಲಿ ಗೋಧಿಯ ಪೈರನ್ನು ಕೊಯ್ಯುತ್ತಿದ್ದರು. ಅವರು ತಮ್ಮ ಕಣ್ಣುಗಳನ್ನು ಎತ್ತಿ ಮಂಜೂಷವನ್ನು ಕಂಡು ಅದನ್ನು ನೋಡಿದ್ದಕ್ಕೆ ಸಂತೋಷಪಟ್ಟರು.

14ಆ ಬಂಡಿಯು ಬೇತ್ಷೆಮೆಷಿನ ಊರಿನವನಾದ ಯೆಹೋಶುವನ ಹೊಲದಲ್ಲಿ ಬಂದು ನಿಂತಿತು.

15ಅಲ್ಲಿ ಒಂದು ದೊಡ್ಡ ಕಲ್ಲು ಇತ್ತು. ಆಗ ಅವರು ಆ ಬಂಡಿಯ ಕಟ್ಟಿಗೆಗಳನ್ನು ಸೀಳಿ ಹಸು ಗಳನ್ನು ಕರ್ತನಿಗೆ ದಹನಬಲಿಯಾಗಿ ಅರ್ಪಿಸಿದರು. ಲೇವಿಯರು ಕರ್ತನ ಮಂಜೂಷವನ್ನೂ ಅದರ ಸಂಗಡ ಇದ್ದ ಬಂಗಾರದ ಕಾಣಿಕೆಗಳುಳ್ಳ ಚಿಕ್ಕ ಪೆಟ್ಟಿಗೆಯನ್ನೂ ಇಳಿಸಿ ಆ ದೊಡ್ಡ ಕಲ್ಲಿನ ಮೇಲಿಟ್ಟುಕೊಂಡಿದ್ದರು. ಆದರೆ ಬೇತ್ಷೆಮೆಷಿನ ಮನುಷ್ಯರು ಆ ದಿವಸದಲ್ಲಿ ಕರ್ತನಿಗೆ ದಹನಬಲಿಗಳನ್ನೂ ಬಲಿಗಳನ್ನೂ ಅರ್ಪಿಸಿ ದರು.

೧ ಸಮುವೇಲನು 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी