ಅನೇಕರು ಅವರೊಳಗೆ ಮುಖ್ಯವಾಗಿ ಸುನ್ನತಿ ಯವರು ಅಧಿಕಾರಕ್ಕೆ ಒಳಗಾಗದವರೂ ವ್ಯರ್ಥವಾದ ಮಾತಿನವರೂ ಮೋಸಗಾರರೂ ಆಗಿದ್ದಾರೆ;
8ಅತಿಥಿಸತ್ಕಾರವನ್ನು ಪ್ರೀತಿಸುವವನು ಒಳ್ಳೆಯವರನ್ನು ಪ್ರೀತಿಸುವವನೂ ಸ್ವಸ್ಥಚಿತ್ತನೂ ನ್ಯಾಯವಂತನೂ ಪರಿಶುದ್ಧನೂ ಜಿತೇಂದ್ರಿಯನೂ ಆಗಿದ್ದು
9ತಾನು ಸ್ವಸ್ಥ ಬೋಧನೆಯಿಂದ ಎಚ್ಚರಿಸುವದಕ್ಕೂ ಎದುರಿಸು ವವರು ಒಪ್ಪುವಂತೆ ಮಾಡುವದಕ್ಕೂ ಶಕ್ತನಾಗಿರುವಂತೆ ತನಗೆ ಕಲಿಸಲ್ಪಟ್ಟ ಪ್ರಕಾರ ವಿಶ್ವಾಸದ ವಾಕ್ಯವನ್ನು ದೃಢವಾಗಿ ಹಿಡಿದುಕೊಂಡವನಾಗಿರತಕ್ಕದ್ದು.
10ಅನೇಕರು ಅವರೊಳಗೆ ಮುಖ್ಯವಾಗಿ ಸುನ್ನತಿ ಯವರು ಅಧಿಕಾರಕ್ಕೆ ಒಳಗಾಗದವರೂ ವ್ಯರ್ಥವಾದ ಮಾತಿನವರೂ ಮೋಸಗಾರರೂ ಆಗಿದ್ದಾರೆ;
11ಅವರು ನೀಚಲಾಭವನ್ನು ಹೊಂದುವದಕ್ಕಾಗಿ ಮಾಡಬಾರದ ಉಪದೇಶವನ್ನು ಮಾಡಿ ಇಡೀ ಕುಟುಂಬಗಳನ್ನೇ ಹಾಳುಮಾಡುತ್ತಾರಾದದರಿಂದ ಅವರ ಬಾಯಿಗಳನ್ನು ಮುಚ್ಚಿಸತಕ್ಕದ್ದು.
12ಕ್ರೇತದವರು ಯಾವಾಗಲೂ ಸುಳ್ಳುಗಾರರೂ ದುಷ್ಟಮೃಗಗಳೂ ಹೊಟ್ಟೇಬಾಕರೂ ಆಗಿದ್ದಾರೆಂದು ಅವರ ಸ್ವಂತ ಪ್ರವಾದಿಗಳಲ್ಲಿ ಒಬ್ಬನು ಹೇಳಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ