ಆಗ ಯೋಸೇಫನು ತಾನು ಅವರ ವಿಷಯದಲ್ಲಿ ಕಂಡ ಕನಸುಗಳನ್ನು ಜ್ಞಾಪಕಮಾಡಿಕೊಂಡು ಅವ ರಿಗೆ--ನೀವು ಗೂಢಚಾರರು; ದೇಶದ ಒಳಗುಟ್ಟನ್ನು ನೋಡುವದಕ್ಕಾಗಿ ಬಂದಿದ್ದೀರಿ ಅಂದನು.
8ಯೋಸೇಫನು ತನ್ನ ಸಹೋದರರನ್ನು ಗುರುತಿಸಿದಾಗ್ಯೂ ಅವರು ಅವನನ್ನು ಗುರುತಿಸಲಿಲ್ಲ.
9ಆಗ ಯೋಸೇಫನು ತಾನು ಅವರ ವಿಷಯದಲ್ಲಿ ಕಂಡ ಕನಸುಗಳನ್ನು ಜ್ಞಾಪಕಮಾಡಿಕೊಂಡು ಅವ ರಿಗೆ--ನೀವು ಗೂಢಚಾರರು; ದೇಶದ ಒಳಗುಟ್ಟನ್ನು ನೋಡುವದಕ್ಕಾಗಿ ಬಂದಿದ್ದೀರಿ ಅಂದನು.
10ಅದ ಕ್ಕವರು--ಅಲ್ಲ, ನಮ್ಮ ಒಡೆಯಾ, ನಿನ್ನ ದಾಸರಾದ ನಾವು ಆಹಾರವನ್ನು ಕೊಂಡುಕೊಳ್ಳುವದಕ್ಕಾಗಿ ಬಂದಿದ್ದೇವೆ.
11ನಾವೆಲ್ಲರೂ ಒಬ್ಬ ಮನುಷ್ಯನ ಕುಮಾರರಾಗಿದ್ದು ಸತ್ಯವಂತರಾಗಿದ್ದೇವೆ. ಆದದರಿಂದ ನಿನ್ನ ದಾಸರು ಗೂಢಚಾರರಲ್ಲ ಅಂದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ