ಯಾಜಕಕಾಂಡ 18:5

ಆದದರಿಂದ ನೀವು ನನ್ನ ನಿಯಮಗಳನ್ನೂ ನಿರ್ಣಯಗಳನ್ನೂ ಕೈಕೊಳ್ಳಿರಿ. ಒಬ್ಬನು ಅವುಗಳನ್ನು ಮಾಡಿದರೆ ಅವನು ಅವುಗಳಲ್ಲಿ ಜೀವಿಸುವನು; ನಾನೇ ಕರ್ತನು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 18

3ನೀವು ವಾಸವಾಗಿದ್ದ ಐಗುಪ್ತದೇಶದ ಕೃತ್ಯಗಳಂತೆ ಮಾಡಬಾರದು; ನಾನು ನಿಮ್ಮನ್ನು ತರುವದಕ್ಕಿರುವ ಕಾನಾನ್‌ದೇಶದ ಕೃತ್ಯಗಳಂತೆ ನೀವು ಮಾಡಬಾರದು ಇಲ್ಲವೆ ನೀವು ಅವರ ನಿಯಮಗಳಿಗನುಸಾರವೂ ನಡೆ ಯಬಾರದು.

4ನೀವು ನನ್ನ ನಿರ್ಣಯಗಳನ್ನು ಕೈಕೊಂಡು ಅವುಗಳಲ್ಲಿ ನಡೆಯುವ ಹಾಗೆ ನನ್ನ ಕಟ್ಟಳೆಗಳಂತೆ ನಡೆಯಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ.

5ಆದದರಿಂದ ನೀವು ನನ್ನ ನಿಯಮಗಳನ್ನೂ ನಿರ್ಣಯಗಳನ್ನೂ ಕೈಕೊಳ್ಳಿರಿ. ಒಬ್ಬನು ಅವುಗಳನ್ನು ಮಾಡಿದರೆ ಅವನು ಅವುಗಳಲ್ಲಿ ಜೀವಿಸುವನು; ನಾನೇ ಕರ್ತನು.

6ನಿಮ್ಮಲ್ಲಿ ಯಾವನಾದರೂ ತನ್ನ ಹತ್ತಿರ ಸಂಬಂಧಿಯ ಬೆತ್ತಲೆತನವನ್ನು ಬಯಲು ಮಾಡುವದಕ್ಕೆ ಅವಳ ಸವಿಾಪಕ್ಕೆ ಹೋಗಬಾರದು; ನಾನೇ ಕರ್ತನು.

7ನಿನ್ನ ತಂದೆತಾಯಿಯ ಬೆತ್ತಲೆತನವನ್ನಾಗಲಿ ನೀನು ಕಾಣಿಸು ವಂತೆ ಮಾಡಬಾರದು; ಆಕೆಯು ನಿನ್ನ ತಾಯಿಯಾಗಿ ದ್ದಾಳೆ; ನೀನು ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು.

ಯಾಜಕಕಾಂಡ 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी