ಯೆರೆಮಿಯ 38:13

ಹೀಗೆ ಹಗ್ಗಗಳಿಂದ ಯೆರೆವಿಾಯನನ್ನು ಎಳೆದು ಅವನನ್ನು ಕುಣಿಯೊಳಗಿಂದ ಎತ್ತಿದರು; ಆಮೇಲೆ ಯೆರೆವಿಾಯನು ಸೆರೆಮನೆಯ ಅಂಗಳದಲ್ಲಿ ಉಳಿದನು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 38

11ಆಗ ಎಬೆದ್ಮೆಲೆಕನು ಆ ಮನುಷ್ಯರನ್ನು ಕರಕೊಂಡು ಖಜಾನೆ ಕೆಳಗಿರುವ ಅರಮನೆಗೆ ಹೋಗಿ ಅಲ್ಲಿಂದ ಹರಿದು ಹೋದ ಹಳೇ ಬಟ್ಟೆಗಳನ್ನೂ ಸವೆದು ಹೋದ ಹಳೇ ವಸ್ತ್ರಗಳನ್ನೂ ತಕ್ಕೊಂಡು ಅವುಗಳನ್ನು ಹಗ್ಗಗಳಿಂದ ಯೆರೆವಿಾಯನ ಬಳಿಗೆ ಕುಣಿಯೊಳಗೆ ಇಳಿಸಿದನು.

12ಕೂಷ್ಯನಾದ ಎಬೆದ್ಮೆಲೆಕನು ಯೆರೆವಿಾಯನಿಗೆ-- ಹರಿದು ಸವೆದು ಹೋದ ಈ ಹಳೇಬಟ್ಟೆಗಳನ್ನು ಹಗ್ಗಗಳ ಕೆಳಗೆ ನಿನ್ನ ಕಂಕಳುಗಳಲ್ಲಿ ಇಟ್ಟುಕೋ ಅಂದನು; ಯೆರೆ ವಿಾಯನು ಹಾಗೆ ಮಾಡಿದನು.

13ಹೀಗೆ ಹಗ್ಗಗಳಿಂದ ಯೆರೆವಿಾಯನನ್ನು ಎಳೆದು ಅವನನ್ನು ಕುಣಿಯೊಳಗಿಂದ ಎತ್ತಿದರು; ಆಮೇಲೆ ಯೆರೆವಿಾಯನು ಸೆರೆಮನೆಯ ಅಂಗಳದಲ್ಲಿ ಉಳಿದನು.

14ಆಗ ಅರಸನಾದ ಚಿದ್ಕೀಯನು ಪ್ರವಾದಿಯಾದ ಯೆರೆವಿಾಯನನ್ನು ತನ್ನ ಬಳಿಗೆ ಕರೆಯಿಸಿ ಕರ್ತನ ಆಲಯದಲ್ಲಿರುವ ಮೂರನೇ ಪ್ರವೇಶಕ್ಕೆ ಕರಕೊಂಡು ಹೋದನು. ಆಗ ಅರಸನು ಯೆರೆವಿಾಯನಿಗೆ--ನಾನು ನಿನ್ನಿಂದ ಒಂದು ಕೇಳುತ್ತೇನೆ, ನನಗೆ ಯಾವದನ್ನಾದರೂ ಬಚ್ಚಿಡಬೇಡ ಅಂದನು.

15ಆಗ ಯೆರೆವಿಾಯನು ಚಿದ್ಕೀಯನಿಗೆ--ನಾನು ನಿನಗೆ ತಿಳಿಸಿದರೆ ನೀನು ನನ್ನನ್ನು ನಿಶ್ಚಯವಾಗಿ ಕೊಂದು ಹಾಕುವದಿಲ್ಲವೋ? ನಾನು ನಿನಗೆ ಆಲೋಚನೆ ಹೇಳಿದರೆ ನೀನು ಕೇಳುವದಿಲ್ಲ ಅಂದನು.

ಯೆರೆಮಿಯ 38 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी