೨ ಸಮುವೇಲನು 2:13

ಹಾಗೆಯೇ ಚೆರೂಯಳ ಮಗನಾದ ಯೋವಾಬನೂ ದಾವೀದನ ಸೇವಕರೂ ಹೊರಟು ಗಿಬ್ಯೋನಿನ ಕೊಳದ ಬಳಿಯಲ್ಲಿ ಕೂಡಿಬಂದರು; ಅವರು ಕೊಳದ ಆಚೆಯಲ್ಲಿಯೂ ಇವರು ಕೊಳದ ಈಚೆಯಲ್ಲಿಯೂ ಕೂತುಕೊಂಡರು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 2

11ದಾವೀದನು ಹೆಬ್ರೋನಿನಲ್ಲಿ ಯೆಹೂದನ ಮನೆಯವರ ಮೇಲೆ ಅರಸನಾಗಿದ್ದ ದಿವಸಗಳು ಏಳು ವರುಷ ಆರು ತಿಂಗಳು.

12ನೇರನ ಮಗನಾಗಿರುವ ಅಬ್ನೇರನೂ ಸೌಲನ ಮಗನಾದ ಈಷ್ಬೋಶೆತನ ಸೇವಕರೂ ಮಹನಯಿಮಿ ನಿಂದ ಹೊರಟು ಗಿಬ್ಯೋನಿಗೆ ಬಂದರು.

13ಹಾಗೆಯೇ ಚೆರೂಯಳ ಮಗನಾದ ಯೋವಾಬನೂ ದಾವೀದನ ಸೇವಕರೂ ಹೊರಟು ಗಿಬ್ಯೋನಿನ ಕೊಳದ ಬಳಿಯಲ್ಲಿ ಕೂಡಿಬಂದರು; ಅವರು ಕೊಳದ ಆಚೆಯಲ್ಲಿಯೂ ಇವರು ಕೊಳದ ಈಚೆಯಲ್ಲಿಯೂ ಕೂತುಕೊಂಡರು.

14ಆಗ ಅಬ್ನೇರನು ಯೋವಾಬನಿಗೆ--ಯೌವನಸ್ಥರು ಎದ್ದು ನಮ್ಮ ಮುಂದೆ ಆಡಲಿ ಅಂದನು. ಅದಕ್ಕೆ ಯೋವಾಬನು--ಅವರು ಏಳಲಿ ಅಂದನು.

15ಹಾಗೆ ಯೇ ಸೌಲನ ಮಗನಾದ ಈಷ್ಬೋಶೆತನ ಕಡೆಯವ ರಾದ ಬೆನ್ಯಾವಿಾನ್ಯರಲ್ಲಿ ಹನ್ನೆರಡು ಮಂದಿಯೂ ದಾವೀದನ ಸೇವಕರಲ್ಲಿ ಹನ್ನೆರಡು ಮಂದಿಯೂ ಎದ್ದು ಹೊರಟು ಒಬ್ಬರ ತಲೆಯನ್ನು ಒಬ್ಬರು ಹಿಡಿದು ಒಬ್ಬರ ಪಕ್ಕೆಯಲ್ಲಿ ಒಬ್ಬರು ಕತ್ತಿಯನ್ನು ತಿವಿದು ಎಲ್ಲರೂ ಸತ್ತುಹೋದರು.

೨ ಸಮುವೇಲನು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी