ಎಸ್ತೇರಳು 1:7

ಅರಸನ ಸ್ಥಿತಿಗೆ ತಕ್ಕಂತೆ ರಾಜರ ದ್ರಾಕ್ಷಾರಸ ವನ್ನು ನಾನಾವಿಧವಾದ ಬಂಗಾರದ ಪಾತ್ರೆಗಳಲ್ಲಿ ಸಮೃದ್ಧಿಯಾಗಿ ಕುಡಿಯಲು ಕೊಟ್ಟರು.

ಸಂದರ್ಭದೊಂದಿಗೆ ಓದಿ · ಎಸ್ತೇರಳು 1

5ಆ ದಿವಸಗಳು ತೀರಿದ ತರುವಾಯ ಅರಸನು ಶೂಷನಿನ ಅರಮನೆ ಯಲ್ಲಿರುವ ಹಿರಿಕಿರಿಯರಾದ ಸಮಸ್ತ ಜನರಿಗೂ ಏಳು ದಿವಸಗಳ ವರೆಗೆ ಅರಸನ ಅರಮನೆಯ ತೋಟದ ಅಂಗಳದಲ್ಲಿ ಔತಣವನ್ನು ಮಾಡಿಸಿದನು.

6ಅಲ್ಲಿ ಬಿಳೀ ಕಲ್ಲಿನ ಕಂಬಗಳಿಗೆ ಬೆಳ್ಳಿಯ ಉಂಗುರಗಳಿಂದಲೂ ರಕ್ತವರ್ಣದ ನಯವಾದ ನಾರು ಹಗ್ಗಗಳಿಂದಲೂ ತೂಗು ಹಾಕಲ್ಪಟ್ಟ ಬಿಳುಪೂ ಹಸರೂ ನೀಲವರ್ಣವೂ ಆದ ತೆರೆಗಳಿದ್ದವು. ಮಂಚಗಳು ಬೆಳ್ಳಿ ಬಂಗಾರ ದವುಗಳಾಗಿ ಕೆಂಪು ನೀಲಿ ಬಿಳುಪು ಕಪ್ಪು ಬಣ್ಣಗಳಾದ ಕಲ್ಲುಗಳಿಂದ ಮಾಡಲ್ಪಟ್ಟು ನೆಲದ ಮೇಲೆ ಇಡಲ್ಪಟ್ಟಿ ದ್ದವು.

7ಅರಸನ ಸ್ಥಿತಿಗೆ ತಕ್ಕಂತೆ ರಾಜರ ದ್ರಾಕ್ಷಾರಸ ವನ್ನು ನಾನಾವಿಧವಾದ ಬಂಗಾರದ ಪಾತ್ರೆಗಳಲ್ಲಿ ಸಮೃದ್ಧಿಯಾಗಿ ಕುಡಿಯಲು ಕೊಟ್ಟರು.

8ಕುಡಿಯು ವದು ಆಜ್ಞಾನುಸಾರವಾಗಿತ್ತು; ಯಾರೂ ಬಲವಂತ ಮಾಡಲಿಲ್ಲ; ಹೀಗೆ ಅರಸನು ತನ್ನ ಮನೆ ವಾರ್ತೆಯ ವರಿಗೆಲ್ಲಾ ಪ್ರತಿ ಮನುಷ್ಯನ ಇಷ್ಟದ ಪ್ರಕಾರ ಮಾಡುವಂತೆ ಅವರಿಗೆ ನೇಮಿಸಿದ್ದನು.

9ಇದಲ್ಲದೆ ವಷ್ಟಿ ಎಂಬ ರಾಣಿಯು ಅರಸನಾದ ಅಹಷ್ವೇರೋ ಷನ ಅರಮನೆಯಲ್ಲಿದ್ದ ಸ್ತ್ರೀಯರಿಗೆ ಔತಣವನ್ನು ಮಾಡಿಸಿದಳು.

ಎಸ್ತೇರಳು 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी