ಆದರೆ ಯೆಹೂದ್ಯನಾದ ಮೊರ್ದೆಕೈ ಅರಮನೆಯ ಬಾಗಲಲ್ಲಿ ಕುಳಿತಿರುವದನ್ನು ನಾನು ನೋಡುವ ವರೆಗೆ ಇದೆಲ್ಲಾ ನನಗೆ ಪ್ರಯೋ ಜನವಿಲ್ಲ ಅಂದನು.
11ಹಾಮಾನನು ತನ್ನ ಐಶ್ವರ್ಯದ ಘನವನ್ನೂ ತನ್ನ ಮಕ್ಕಳ ಹೆಚ್ಚಳವನ್ನೂ ಅರಸನು ತನ್ನನ್ನು ಯಾವದರಲ್ಲಿ ಹೆಚ್ಚಿಸಿದ್ದಾನೋ ಅರಸನ ಪ್ರಭು ಗಳ ಮೇಲೆಯೂ ಸೇವಕರ ಮೇಲೆಯೂ ತನ್ನನ್ನು ಹೇಗೆ ಎತ್ತಿದ್ದಾನೆಂದೂ ಎಲ್ಲವನ್ನೂ ಅವರಿಗೆ ವಿವರ ವಾಗಿ ಹೇಳಿದನು.
12ಇದಲ್ಲದೆ--ರಾಣಿಯಾದ ಎಸ್ತೇ ರಳು ತಾನು ಮಾಡಿಸಿದ ಔತಣಕ್ಕೆ ನನ್ನ ಹೊರತು ಅರಸನ ಸಂಗಡ ಬೇರೊಬ್ಬರನ್ನು ಕರೆಯಲಿಲ್ಲ. ನಾಳೆಗೂ ಆಕೆಯಿಂದ ನಾನು ಅರಸನ ಸಂಗಡ ಆಕೆಯ ಬಳಿಗೆ ಕರೆಯಲ್ಪಟ್ಟಿದ್ದೇನೆ.
13ಆದರೆ ಯೆಹೂದ್ಯನಾದ ಮೊರ್ದೆಕೈ ಅರಮನೆಯ ಬಾಗಲಲ್ಲಿ ಕುಳಿತಿರುವದನ್ನು ನಾನು ನೋಡುವ ವರೆಗೆ ಇದೆಲ್ಲಾ ನನಗೆ ಪ್ರಯೋ ಜನವಿಲ್ಲ ಅಂದನು.
14ಆಗ ಅವನ ಹೆಂಡತಿಯಾದ ಜೆರೆಷಳೂ ಅವನ ಸಮಸ್ತ ಸ್ನೇಹಿತರೂ ಅವನಿಗೆಐವತ್ತು ಮೊಳ ಉದ್ದವಾದ ಒಂದು ಗಲ್ಲಿನ ಮರವು ಮಾಡಲ್ಪಡಲಿ; ಮೊರ್ದೆಕೈ ಅದರಲ್ಲಿ ಹಾಕಲ್ಪಡುವ ಹಾಗೆ ನಾಳೆ ಅರಸನ ಸಂಗಡ ಮಾತನಾಡು; ತರುವಾಯ ಅರಸನ ಸಂಗಡ ಔತಣಕ್ಕೆ ಸಂತೋಷ ವಾಗಿ ಹೋಗು ಅಂದರು. ಈ ಮಾತು ಹಾಮಾನನಿಗೆ ಚೆನ್ನಾಗಿ ಕಾಣಿಸಿದ್ದರಿಂದ ಗಲ್ಲಿನ ಮರವನ್ನು ಸಿದ್ಧ ಮಾಡಿಸಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ