ನನ್ನ ಬೆಟ್ಟ ಗಳನ್ನೆಲ್ಲಾ ಸಮದಾರಿಯನ್ನಾಗಿ ಮಾಡಿ ನನ್ನ ರಾಜ ಮಾರ್ಗಗಳನ್ನು ಉನ್ನತಪಡಿಸುವೆನು.
9ನೀನು ಬಂದಿ ಸಲ್ಪಟ್ಟವರಿಗೆ--ಹೊರಗೆ ಹೋಗಿರಿ, ಕತ್ತಲೆಯಲ್ಲಿರು ವವರಿಗೆ--ನಿಮ್ಮನ್ನು ತೋರ್ಪಡಿಸಿಕೊಳ್ಳಿರಿ ಎಂದು ಹೇಳಬಹುದು. ಅವರು ದಾರಿಗಳಲ್ಲಿ ಮೇಯಿಸುವರು, ಅವರ ಎಲ್ಲಾ ಎತ್ತರವಾದ ಪ್ರದೇಶಗಳು ಕೂಡ ಅವ ರಿಗೆ ಹುಲ್ಲುಗಾವಲಾಗಿರುವವು.
10ಅವರಿಗೆ ಹಸಿವೆ ಯಾಗಲಿ ಬಾಯಾರಿಕೆಯಾಗಲಿ ಇರವು. ಇಲ್ಲವೆ ಝಳವೂ ಬಿಸಿಲೂ ಬಡಿಯವು; ಯಾಕಂದರೆ ಅವ ರನ್ನು ಕರುಣಿಸುವಾತನು ಅವರನ್ನು ನಡೆಸುತ್ತಾ ನೀರು ಕ್ಕುವ ಒರತೆಗಳ ಬಳಿಗೆ ತರುವನು.
11ನನ್ನ ಬೆಟ್ಟ ಗಳನ್ನೆಲ್ಲಾ ಸಮದಾರಿಯನ್ನಾಗಿ ಮಾಡಿ ನನ್ನ ರಾಜ ಮಾರ್ಗಗಳನ್ನು ಉನ್ನತಪಡಿಸುವೆನು.
12ಇಗೋ, ಇವರು ದೂರದಿಂದ ಬರುತ್ತಾರೆ. ಇಗೋ, ಇವರು ಬಡಗಣದಿಂದ ಮತ್ತು ಪಡುವಣದಿಂದ, ಇವರು ಸೀನೀಮ್ ದೇಶದಿಂದ ಬರುತ್ತಿದ್ದಾರೆ.
13ಆಕಾಶವೇ, ಹರ್ಷಿಸು; ಭೂಮಿಯೇ, ಉಲ್ಲಾಸಪಡು! ಪರ್ವತ ಗಳೇ ಹರ್ಷಧ್ವನಿಗೈಯಿರಿ. ಯಾಕಂದರೆ ಕರ್ತನು ತನ್ನ ಜನರನ್ನು ಆದರಿಸಿ, ಶ್ರಮೆಪಟ್ಟ ತನ್ನವರನ್ನು ಕರುಣಿಸುವನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ